7

ಸಾಮರಸ್ಯದ ನಡಿಗೆ ಡಿ. 12ರಂದು

Published:
Updated:
ಸಾಮರಸ್ಯದ ನಡಿಗೆ ಡಿ. 12ರಂದು

ಮಂಗಳೂರು: ಜಾತ್ಯತೀತ ಪಕ್ಷ, ಸಂಘಟನೆಗಳ ಸಹಭಾಗಿತ್ವದಲ್ಲಿ ಸಾಮರಸ್ಯದ ನಡಿಗೆ ಸೌಹಾರ್ದದೆಡೆಗೆ ಕಾರ್ಯಕ್ರಮವನ್ನು ಡಿಸೆಂಬರ್ 12ರಂದು ಫರಂಗಿಪೇಟೆಯಿಂದ ಮಾಣಿಯವರೆಗೆ ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವ ಬಿ. ರಮಾನಾಥ ರೈ, ಬುದ್ಧಿವಂತರ ಜಿಲ್ಲೆಯಲ್ಲಿ ಸಾಮರಸ್ಯ ಇಲ್ಲದಾಗಿದೆ. ಇತ್ತೀಚಿನ ದಿನಗಳಲ್ಲಿ ಕೋಮು ಸಂಘರ್ಷ ಹೆಚ್ಚಾಗಿದೆ.‌ಇದನ್ನು ನಿವಾರಿಸುವ ದೃಷ್ಟಿಯಿಂದ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

ಬೆಳಿಗ್ಗೆ 9 ಕ್ಕೆ ಫರಂಗಿಪೇಟೆಯಿಂದ ಜಾಥಾ ಆರಂಭವಾಗಲಿದ್ದು, ಸಂಜೆ 4 ಗಂಟೆಗೆ ಮಾಣಿಯಲ್ಲಿ ಮುಕ್ತಾಯ ಆಗಲಿದೆ. ನಂತರ ಸಾಮರಸ್ಯ ಸಭೆ ನಡೆಯಲಿದೆ. ಸಾಮಾಜಿಕ ಮುಂದಾಳುಗಳು, ಸಾಮರಸ್ಯಕ್ಕಾಗಿ ಹೋರಾಟ ಮಾಡುವವರನ್ನು ಆಮಂತ್ರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry