7

ಕನ್ನಡ ಉಳಿಸಿ, ಬೆಳೆಸಲು ಸಲಹೆ

Published:
Updated:

ಶಕ್ತಿನಗರ: ‘ಕನ್ನಡ ಉಳಿಸುವ ಮತ್ತು ಬೆಳೆಸುವ ಕಾಯಕದಲ್ಲಿ ಪ್ರತಿಯೊಬ್ಬರು ತೊಡಗಿಕೊಳ್ಳಬೇಕು’ ಎಂದು ಚಿಕ್ಕಸೂಗೂರು ಚೌಕಿ ಮಠದ ಡಾ. ಸಿದ್ಧಲಿಂಗಸ್ವಾಮಿ ತಿಳಿಸಿದರು.

ಚಿಕ್ಕಸೂಗೂರು ಗ್ರಾಮದಲ್ಲಿ ಈಚೆಗೆ ನಡೆದ ಗಡಿನಾಡು ಕನ್ನಡಿಗರ ಸಮಾವೇಶದಲ್ಲಿ ಅವರು ಮಾತನಾಡಿದರು. ಕನ್ನಡ ರಕ್ಷಣ ವೇದಿಕೆಯ (ನಾರಾಯಣಗೌಡ ಬಣ)ಜಿಲ್ಲಾ ಘಟಕದ ಅಧ್ಯಕ್ಷ ವಿನೋದರೆಡ್ಡಿ ಮಾತನಾಡಿ, ‘ಕನ್ನಡಿಗರು ರೈಲ್ವೆ ಇಲಾಖೆ ಹುದ್ದೆ ಪಡೆಯಲು ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕಿತ್ತು. ಕರ್ನಾಟಕ ರಕ್ಷಣಾ ವೇದಿಕೆಯ ನಿರಂತರ ಹೋರಾಟದಿಂದ ಕನ್ನಡಿಗರು ಕನ್ನಡದಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗಿದೆ’ ಎಂದರು.

ಮುಖಂಡರಾದ ರವಿಬೋಸರಾಜು, ರಾಜಾರಾಯಪ್ಪನಾಯಕ, ಮಹಾಂತೇಶ ಪಾಟೀಲ ಅತ್ತನೂರು,ಶ್ರೀನಿವಾಸರೆಡ್ಡಿ, ನರಸಮ್ಮ ಶರಣಪ್ಪನಾಮಲಿ, ಬಸವರಾಜ ವಕೀಲ, ಅಂಬಯ್ಯಗೌಡ, ಚಂದ್ರಕಲಾಬಾಬು, ಯಶೋಧಮ್ಮ, ಲಕ್ಷ್ಮೀ ನರಸಪ್ಪ, ರಸೂಲ್‌ಸಾಬ್, ರಾಮಕೃಷ್ಣ,

ಯೂಸೂಫ್‌ಅಲಿ, ಚಿನ್ನಯ್ಯ, ಕೆ.ಲಕ್ಷ್ಮಣ, ಸಿದ್ಧನಗೌಡ, ಸುರೇಶಬಾಬು ಮುಂತಾದವರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry