7

ಹೊಸೂರು ರಸ್ತೆಯಲ್ಲಿ ‘ನವಮಿ ಫ್ಯೂನಿಕ್’

Published:
Updated:
ಹೊಸೂರು ರಸ್ತೆಯಲ್ಲಿ ‘ನವಮಿ ಫ್ಯೂನಿಕ್’

‘ಜಿಎಸ್‌ಟಿ ಮತ್ತು ರೇರಾ ಅನುಷ್ಠಾನದಿಂದ ರಿಯಲ್‌ಎಸ್ಟೇಟ್‌ ವಲಯಕ್ಕೆ ಒಳಿತು ಆಗಿದೆ. ಬಿಲ್ಡರ್‌ಗಳು ಮತ್ತು ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕ್ರೆಡಾಯ್ ಮಹತ್ವದ ಪಾತ್ರ ನಿರ್ವಹಿಸುತ್ತಿದೆ’ ಎಂದು ನವಮಿ ಬಿಲ್ಡರ್ಸ್‌ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಡಿ.ರಘು ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಈಚೆಗೆ ಮಾಧ್ಯಮ ಪ್ರತಿನಿಧಿಗಳೊಡನೆ ಮಾತನಾಡಿದ ಅವರು, ನವಮಿ ಬಿಲ್ಡರ್ಸ್‌ ಕೈಗೆತ್ತಿಕೊಂಡಿರುವ ವಿವಿಧ ಯೋಜನೆಗಳನ್ನೂ ಪರಿಚಯಿಸಿದರು.

‘ಎಲೆಕ್ಟ್ರಾನಿಕ್ ಸಿಟಿ ಸಮೀಪ ‘ನವಮಿ ಫ್ಯೂನಿಕ್’ ನಿರ್ಮಾಣವಾಗುತ್ತಿದೆ. ಇದರಲ್ಲಿ 160 ಫ್ಲಾಟ್‌ಗಳು ಲಭ್ಯ. ನವಮಿ ನಕ್ಷತ್ರ, ನವಮಿ ವರ್ಷಾ, ನವಮಿ ನಂದಿನಿ, ನವಮಿ ಸಿಂಫನಿ ಯೋಜನೆಗಳಿಂದ ನಮ್ಮ ಸಂಸ್ಥೆ ನಗರದಲ್ಲಿ ಮನೆಮಾತಾಗಿದೆ. ಗ್ರಾಹಕರ ಜೊತೆಗಿನ ಒಡನಾಟ ಚೆನ್ನಾಗಿದೆ. ಹೀಗಾಗಿ ಮುಂದಿನ ಯೋಜನೆಗಳಿಗೂ ಬೇಡಿಕೆ ವ್ಯಕ್ತವಾಗಿದೆ’ ಎಂದರು.

ಹೊಸೂರು ರಸ್ತೆಯ ಪ್ರಸ್ತಾವಿತ ಮೆಟ್ರೊ ಸ್ಟೇಷನ್ ಎದುರು ‘ನವಮಿ ಫ್ಯೂನಿಕ್’ ಬರಲಿದೆ. ಬಾಸ್ಕೆಟ್ ಬಾಲ್ ಅಂಕಣ, ಜಾಗಿಂಗ್  ಟ್ರ್ಯಾಕ್, ಈಜುಕೊಳ, ಸಿ.ಸಿ. ಟಿ.ವಿ. ಕ್ಯಾಮೆರಾಗಳು, ಉದ್ಯಾನಗಳು, ಟೇಬಲ್ ಟೆನಿಸ್‌ಗಾಗಿ ನಿಗದಿತ ಸ್ಥಳ, ಜಿಮ್, ಕೇರಂ ಹಾಗೂ ಪೂಲ್ ಟೇಬಲ್ ಈ ಯೋಜನೆಯಲ್ಲಿವೆ ಎಂದರು.

‘ನಗರದಲ್ಲಿ ನವಮಿ, ಆಸ್ಪತ್ರೆಯೊಂದನ್ನು ನಡೆಸುತ್ತಿದೆ. ಅತ್ಯುತ್ತಮ ಶಿಕ್ಷಣ ಒದಗಿಸುವ ಶಾಲೆ ತೆರೆಯುವ ಯೋಜನೆಯಿದೆ’ ಎಂದು ಮುಂದಿನ ಯೋಜನೆಗಳನ್ನು ವಿವರಿಸಿದರು.

‘ಹೊಸ ವಸತಿ ನೀತಿಯು ಖರೀದಿಗಾರರಿಗೆ ಅನುಕೂಲಕರವಾಗಿದೆ. ಜನರ ಖರೀದಿ ಸಾಮರ್ಥ್ಯ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಗೃಹನಿರ್ಮಾಣ ವಲಯ ಬೆಳೆಯಲಿದೆ’ ಎಂದು ಆತ್ಮವಿಶ್ವಾಸದ ನುಡಿಗಳನ್ನು ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry