ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕಿಗೆ ಪರ್ಯಾಯ ಬೆಳೆ ರೇಷ್ಮೆ

Last Updated 1 ಡಿಸೆಂಬರ್ 2017, 4:37 IST
ಅಕ್ಷರ ಗಾತ್ರ

ಹಂಪಾಪುರ: ‘ದೇಶದಲ್ಲಿ ಗುಣ ಮಟ್ಟದ ರೇಷ್ಮೆಯನ್ನು ಬೆಳೆಯ ಲಾಗುತ್ತಿದೆಯಾದರೂ ಉತ್ಪಾದಕರ ಕೊರತೆಯಿಂದಾಗಿ ಚೀನಾ ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದು ರೇಷ್ಮೆಯನ್ನು ಆಮದು ಮಾಡಿಕೊಳ್ಳದಂತೆ ಮಾಡಲು ರೈತರು ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆಯನ್ನು ಬೆಳೆಯಬೇಕಿದೆ’ ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ತಿಳಿಸಿದರು.

ಇಲ್ಲಿಗೆ ಸಮೀಪದ ಬೊಪ್ಪನಹಳ್ಳಿ ಗ್ರಾಮದ ರೇಷ್ಮೆ ಬೆಳೆಗಾರ ನಿಂಗೇಗೌಡ ಅವರ ಜಮೀನಿಗೆ ಗುರುವಾರ ಭೇಟಿ ನೀಡಿ ಅವರು ಬೆಳೆದಿರುವ ರೇಷ್ಮೆಯನ್ನು ವೀಕ್ಷಿಸಿ ಮಾತನಾಡಿದರು.

ಕರ್ನಾಟಕ ಶೇ 60 ರಷ್ಟು ರೇಷ್ಮೆಯನ್ನು ಬೆಳೆದು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ತಮಿಳುನಾಡು, ಮಹಾರಾಷ್ಟ್ರ ಹಾಗೂ ಅವಿಭಜಿತ ಆಂದ್ರಪ್ರದೇಶ ಭಾಗದಲ್ಲಿ ತಲಾ ಶೇ10 ರಷ್ಟು ಹಾಗೂ ಇನ್ನುಳಿದ ರಾಜ್ಯಗಳಲ್ಲಿ ಒಟ್ಟಾರೆ ಶೇ 10ರಷ್ಟು ಬೆಳೆಯಲಾಗುತ್ತಿದೆ ಎಂದರು.

ಮೈಸೂರು ಜಿಲ್ಲೆಯಲ್ಲಿ ಎಚ್.ಡಿ. ಕೋಟೆ ತಾಲ್ಲೂಕಿನಲ್ಲೇ ಸುಮಾರು 434 ಎಕರೆ ಪ್ರದೇಶದಲ್ಲಿ ರೇಷ್ಮೆಯನ್ನು ಬೆಳೆಯುತ್ತಿದ್ದು ಇನ್ನು 2 ವರ್ಷ ಅವಧಿಯಲ್ಲಿ ಈ ಪ್ರಮಾಣವನ್ನು ದುಪ್ಪಟ್ಟು ಮಾಡುವ ಗುರಿಯನ್ನು ಹೊಂದಲಾಗಿದೆ. ಹಿಂದೆ ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾಗುತ್ತಿದ್ದರಿಂದ ರೇಷ್ಮೆಯನ್ನು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ, ಆದರೆ ನಮ್ಮ ಸಂಶೋಧಕರ ತಂಡ ಹೆಚ್ಚು ಮಳೆಗೂ ಹೊಂದುಕೊಳ್ಳುವಂತ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ತಿಳಿಸಿದರು.

ತಂಬಾಕಿಗೆ ಪರ್ಯಾಯ: ತಾಲ್ಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ತಂಬಾಕಿಗೆ ಪರ್ಯಾಯವಾಗಿ ರೇಷ್ಮೆಯನ್ನು ಬೆಳೆಯುವಂತೆ ರೈತರನ್ನು ಮನವೊಲಿಸುವುದಾಗಿ ತಿಳಿಸಿದ ಅವರು, ಕಡಿಮೆ ನೀರುಳ್ಳ ಹಾಗೂ ಮಳೆಯಾಶ್ರಿತ ಪ್ರದೇಶದಲ್ಲೂ ಈ ಬೆಳೆಯನ್ನು ಬೆಳೆಯಬಹುದಾಗಿದೆ ಎಂದು ಅವರು ರೈತರಿಗೆ ಸಲಹೆ ನೀಡಿದರು.

ರೇಷ್ಮೆ ಬೆಳೆಯಲು ರೈತರು ಮುಂದಾದರು ಉಚಿತವಾಗಿ ರೈತರಿಗೆ ತರಬೇತಿ ನೀಡುವುದಲ್ಲದೇ ಹಿಪ್ಪುನೇರಳೆ ಬೆಳೆಗೆ ನರೇಗಾದಿಂದ ಗುಂಡಿ ತೆಗೆಸಲಾಗುವುದು. ಅಲ್ಲದೇ, ಅಲ್ಲದೇ ರೇಷ್ಮೆ ಬೆಳೆಗಳಿಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ಶೇ 90 ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ತಿಳಿಸಿದರು.

ರೇಷ್ಮೆ ಕೃಷಿ ಸಾವಯವ ಕೃಷಿ ತಜ್ಞ ಡಾ.ಕೆ.ಆರ್. ಹುಲ್ಲುನಾಚೇಗೌಡ, ಜಿಲ್ಲಾ ರೇಷ್ಮೆ ಉಪನಿರ್ದೇಶಕ ಜವರೇಗೌಡ, ತಾಲ್ಲೂಕು ಸಹಾಯಕ ನಿರ್ದೇಶಕ ಕೇಶವಮೂರ್ತಿ, ರೇಷ್ಮೆ ವಿಸ್ತರಾಣಾಧೀಕಾರಿ ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT