4

ರಸ್ತೆ ದುರಸ್ತಿಯಾಗದಿದ್ದರೆ ಚುನಾವಣೆ ಬಹಿಷ್ಕಾರ

Published:
Updated:

ನಾಪೋಕ್ಲು: ಸಮೀಪದ ಹಳೆತಾಲೂಕು ಎಂಬಲ್ಲಿಂದ ಮೂಟೇರಿ ಉಮಾ ಮಹೇಶ್ವರಿ ದೇವಾಲಯದ ಈಸ್ಟ್ ಕೊಳಕೇರಿ ಗ್ರಾಮಕ್ಕೆ ಸಾಗುವ ರಸ್ತೆ ಪೂರ್ಣ ಹದಗೆಟ್ಟಿದೆ. ಈ ದಾರಿಯಲ್ಲಿ ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ. ಡಾಂಬರೀಕರಣ ಕಾಣದ ರಸ್ತೆಯಿಂದ ಗ್ರಾಮಸ್ಥರು ಪರದಾಡುವಂತಾಗಿದೆ.

ಡಾಂಬರ್‌ ಸಂಪೂರ್ಣ ಮೇಲೆದ್ದಿರುವ ಕಾರಣ ವಾಹನ ಸಂಚಾರವಷ್ಟೇ ಅಲ್ಲ ಗ್ರಾಮಸ್ಥರು ನಡೆದಾಡಲೂ ಆಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವ್ಯಾಪ್ತಿಯಲ್ಲಿ ವಾಸಿಸುವ ಬಿದ್ದಾಟಂಡ, ನೆಡುಮಂಡ, ಪುಲ್ಲೇರ, ಅಚ್ಚಾಂಡಿರ, ತಟ್ಟಂಡ ಕುಟುಂಬಸ್ಥರು, ಶಾಲೆ–ಕಾಲೇಜು ವಿದ್ಯಾರ್ಥಿಗಳು ಸಮಸ್ಯೆ ಎದುರಾಗಿದೆ.

ಪ್ರಸಿದ್ಧ ಬಿದ್ದಾಟಂಡ ವಾಡೆಯ ನೂರಂಬಡ ಊರ್ ಮಂದ್‌ಗೆ ಇದೇ ರಸ್ತೆಯಲ್ಲಿ ಸಾಗಬೇಕಿದೆ. ಹುತ್ತರಿ ಹಬ್ಬದ ಕೋಲಾಟದಲ್ಲಿ ಇಲ್ಲಿ ಸಾವಿರಾರು ಮಂದಿ ಸೇರುತ್ತಾರೆ. ರಸ್ತೆ ದುರಸ್ತಿಗೆ ಸಂಬಂಧಿಸಿದವರು ಕ್ರಮ ಕೈಗೊಳ್ಳದಿದ್ದರೆ, ಮುಂದಿನ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಬಿದ್ದಾಟಂಡ ಸಂಪತ್, ನೆಡುಮಂಡ ಕೃತಿ, ಅಚ್ಚಾಂಡಿರ ಸಾಬು ದೇವಯ್ಯ, ಬಿದ್ದಾಟಂಡ ಜಿನ್ನು ನಾಣಯ್ಯ, ಎಚ್ಚರಿಸಿದ್ದಾರೆ. ‘ಆಟೊ ಚಾಲಕರು ಕೂಡ ಈ ರಸ್ತೆಯಲ್ಲಿ ಪ್ರಯಾಣಿಸುತ್ತಿಲ್ಲಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥ ಬಿದ್ದಾಟಂಡ ಸಂಪತ್ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry