7

ಇತಿಹಾಸಕ್ಕೆ ದ್ರೋಹ ಬಗೆದ ಪ್ರತಾಪ ಸಿಂಹ

Published:
Updated:

ಕೂಡಲಸಂಗಮ: ಕಿತ್ತೂರ ರಾಣಿ ಚನ್ನಮ್ಮ ಹಾಗೂ ವೀರ ಮಾತೆ ಒನಕೆ ಓಬವ್ವ ಕುರಿತು ಅವಹೇಳನಕಾರಿಯಾಗಿ ಸಂಸದ ಪ್ರತಾಪ ಸಿಂಹ ತಮ್ಮ ಪೇಸ್ ಬುಕ್‌ನಲ್ಲಿ ಅಶ್ಲೀಲ ಪದ ಬರೆದು ಭಾರತ ಹಾಗೂ ಕರ್ನಾಟಕ ಸ್ವತಂತ್ರ ಇತಿಹಾಸಕ್ಕೆ ದ್ರೋಹ ಬಗೆದಿದ್ದಾರೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾರನ್ನೂ ಟೀಕಿಸುವ ಅಹಂಕಾರದಲ್ಲಿ ಚನ್ನಮ್ಮ, ಓಬವ್ವನನ್ನು ಅವಮಾನ ಮಾಡಿರುವುದು ನಾಡಿನ ಬಹುಸಂಖ್ಯಾತ ಸಮಾಜಕ್ಕೆ ನೋವಾಗಿದೆ. ಕೂಡಲೇ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಪ್ರತಾಪ ಸಿಂಹನನ್ನು ಪಕ್ಷದಿಂದ ಉಚ್ಚಾಟಿಸಬೇಕು. ಸರ್ಕಾರ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಇಲ್ಲದೇ ಹೊದರೆ ರಾಜ್ಯದಾದ್ಯಂತ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry