7

ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಾಲ್ವರು ಗೂಬೆ ಮಾರಾಟಗಾರರ ಬಂಧನ

Published:
Updated:
ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಾಲ್ವರು ಗೂಬೆ ಮಾರಾಟಗಾರರ ಬಂಧನ

ದೊಡ್ಡಬಳ್ಳಾಪುರ: ದೊಡ್ಡ ಗೂಬೆಗಳನ್ನು ಹಿಡಿದು ಮಾರಾಟಕ್ಕೆ ಯತ್ನಿಸಿದ್ದ ನಾಲ್ಕು ಜನರನ್ನು ಗುರುವಾರ ತಾಲ್ಲೂಕು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿ ಗೂಬೆಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಅರಣ್ಯಾಧಿಕಾರಿಗಳಿಗೆ ಬಂದ ನಿಖರವಾದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳಾದ ವಲಯ ಅರಣ್ಯ ಅಧಿಕಾರಿ ನಟರಾಜ್‌, ಉಪವಲಯ ಅರಣ್ಯ ಅಧಿಕಾರಿ ಬಿ.ಎಸ್‌.ರಾಜಶೇಖರ್‌, ಗೂಬೆ ಮಾರಾಟಗಾರರಾದ ಓಬದೇನಹಳ್ಳಿ ಗ್ರಾಮ ನಿವಾಸಿ ಗಿರೀಶ್, ದೇವನಹಳ್ಳಿ ತಾಲ್ಲೂಕಿನ ಚಿಕ್ಕಗೊಲ್ಲಹಳ್ಳಿ ಗ್ರಾಮದ ನಿವಾಸಿ ಗಂಗರಾಜು, ದೊಡ್ಡಬಳ್ಳಾಪುರದ ದೇವರಾಜ ನಗರದ ನವೀನ್, ಲೊಕೇಶ್‌ ಎಂಬುವವರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಎರಡು ದೊಡ್ಡ ಗೂಬೆಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳ ವಿರುದ್ದ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry