ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾಷೆ ಸಂಸ್ಕೃತಿಯ ರಾಜಕೀಕರಣ ಸಲ್ಲ’

Last Updated 1 ಡಿಸೆಂಬರ್ 2017, 8:41 IST
ಅಕ್ಷರ ಗಾತ್ರ

ಹೇರೂರು(ಬಾಳೆಹೊನ್ನೂರು): ಆಳುವ ಸರ್ಕಾರಗಳು ಭಾಷೆ, ಸಂಸ್ಕೃತಿಯನ್ನು ರಾಜಕೀಕರಣಗೊಳಿಸಿ ಇತಿಹಾಸವನ್ನು ಅಪಭ್ರಂಶಗೊಳಿಸುವ ಕೆಲಸ ಮಾಡುತ್ತಿರುವುದು ವಿಷಾದನೀಯ ಎಂದು ಜಯಪುರ ಬಿಜಿಎಸ್ ಕಾಲೇಜಿನ ಕನ್ನಡ ಉಪನ್ಯಾಸಕ ರಚನ್ ತಿಳಿಸಿದರು.

ಕೊಪ್ಪ ತಾಲ್ಲೂಕಿನ ಹೇರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಳೆ ವಿದ್ಯಾರ್ಥಿಗಳ ಸಂಘದಿಂದ ಶಾಲೆಯ ರಂಗಮಂದಿರದಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಹು.ವಾ.ಶ್ರೀವತ್ಸ ನುಡಿನಮನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಸಾವಿರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಕನ್ನಡದ ಪ್ರಾಮುಖ್ಯತೆಯನ್ನು ಇಂದಿನ ಯುವ ಜನಾಂಗ ಅರಿಯಬೇಕು. 8 ಜ್ಞಾನಪೀಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಕೀರ್ತಿ ಕನ್ನಡದ್ದು ಎಂದರು.

ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ.ವಿ.ರಾಜೇಶ್ ಮಾತನಾಡಿ, ‘ಹು.ವಾ.ಶ್ರೀವತ್ಸ ಅವರೇ ನಮಗೆ ಪ್ರೇರಣೆಯಾಗಿದ್ದು, ಸಂಘಟನೆಯಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಕ್ರಿಯವಾಗಿ ಮುನ್ನೆಡೆಸಲು ಚಿಂತಿಸಲಾಗಿದೆ ಎಂದರು.

ರಾಜ್ಯೋತ್ಸವದ ಅಂಗವಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ದೂಬಳ ಕೈಮರದಿಂದ ಹೇರೂರಿನವರೆಗೆ ಮೆರವಣಿಗೆ ನಡೆಯಿತು.

ಕನ್ನಡ ಸಾಹಿತ್ಯಪರಿಷತ್ ಮೇಗುಂದಾ ಹೋಬಳಿ ಘಟಕದ ಅಧ್ಯಕ್ಷ ಬಿ.ಎಸ್.ವಿವೇಕಾನಂದ, ಉದ್ಯಮಿ ರತ್ನಾಕರ ಪೂಜಾರಿ, ಗುರುವಪ್ಪಗೌಡ, ಕೊಪ್ಪ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎನ್.ಕೆ.ಉದಯಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತಕೃಷ್ಣಪ್ಪ, ಶಬರೀಶ್, ಚಿಮ್ಮನಕೊಡಿಗೆ ನಟರಾಜ್,ಎಂ.ಕೆ.ಸುರೇಂದ್ರ, ಸಿಆರ್‌ಪಿ ಸುಜಾತಾ, ಕಾರ್ತಿಕ್ ಹುಲ್ಸೆ, ವಾಸು, ಎಸ್ ಡಿಎಂಸಿ ಅಧ್ಯಕ್ಷ ಎಚ್.ಕೆ.ಶಶಿಧರ, ಎಚ್.ಎಸ್.ಬಾಲಚಂದ್ರ, ರಾಜೇಶ್, ಅಬ್ದುಲ್ ಹಕ್, ಪ್ರಸನ್ನಕುಮಾರ್, ಬೆನಿಲ್ಡಾ ಡಿಸೋಜ, ವಿದ್ಯಾ, ಸೇವಾನಾಯ್ಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT