5

ಸಿದ್ಧಾರೂಢ ಮಠಕ್ಕೆ ನಟಿ ಕಾಜೋಲ್‌ ಭೇಟಿ

Published:
Updated:
ಸಿದ್ಧಾರೂಢ ಮಠಕ್ಕೆ ನಟಿ ಕಾಜೋಲ್‌ ಭೇಟಿ

ಹುಬ್ಬಳ್ಳಿ: ಬಾಲಿವುಡ್‌ ನಟಿ ಕಾಜೋಲ್‌ ದೇವಗನ್‌ ಗುರುವಾರ ಕುಟುಂಬ ಸಮೇತರಾಗಿ ಇಲ್ಲಿನ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ತಾಯಿ ತನುಜಾ, ತಂಗಿ ತನಿಶಾ ಮುಖರ್ಜಿ, ಪುತ್ರ ಯುಗ್‌ ಸಮೇತ ಮಠಕ್ಕೆ ಬಂದ ಕಾಜೋಲ್‌, ಸಿದ್ಧಾರೂಢರು ಹಾಗೂ ಗುರುನಾಥಾರೂಢರ ಮೂರ್ತಿಗೆ ಅಭಿಷೇಕ ಮಾಡಿಸಿದರು.

‘ರಾಜ್ಯಕ್ಕೆ ಬಂದಾಗಲೆಲ್ಲ ಕಾಜೋಲ್‌ ಮಠಕ್ಕೆ ಬಂದು ಸಿದ್ಧಾರೂಢರ ಆಶೀರ್ವಾದ ಪಡೆಯುತ್ತಾರೆ. ಬಾಲಕಿಯಾಗಿದ್ದಾಗೊಮ್ಮೆ ಬಂದಿದ್ದ ಕಾಜೋಲ್, ಐದು ವರ್ಷಗಳ ಹಿಂದೆಯೂ ಮಠಕ್ಕೆ ಭೇಟಿ ನೀಡಿದ್ದರು’ ಎಂದು ಮಠದ ಟ್ರಸ್ಟ್‌ ಕಮಿಟಿ ಧರ್ಮದರ್ಶಿ ನಾರಾಯಣ ಪ್ರಸಾದ ಪಾಠಕ್‌ ತಿಳಿಸಿದರು. ಕಾಜೋಲ್‌ ನೋಡಲು ಅಭಿಮಾನಿಗಳು ಮುಗಿಬಿದ್ದರು. ಮಾಧ್ಯಮದವರೊಂದಿಗೆ ಮಾತನಾಡಲು ಅವರು ನಿರಾಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry