ಪೇಶಾವರದ ಕೃಷಿ ವಿದ್ಯಾಲಯದ ಮೇಲೆ ತಾಲಿಬಾನ್ ಉಗ್ರರ ದಾಳಿ: ಒಂಬತ್ತು ಮಂದಿ ಸಾವು, 30 ಮಂದಿಗೆ ಗಾಯ

ಇಸ್ಲಾಮಾಬಾದ್: ಪಾಕಿಸ್ತಾನದ ಪೇಶಾವರದ ಕೃಷಿ ಕಾಲೇಜಿನ ಮೇಲೆ ತಾಲಿಬಾನ್ ಉಗ್ರರು ಶುಕ್ರವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದು, 30 ಮಂದಿ ಗಾಯಗೊಂಡಿದ್ದಾರೆ.
ಘಟನಾ ಸ್ಥಳದಲ್ಲಿ ಪೊಲೀಸರು ಮತ್ತು ಸೇನಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಾಲ್ಕು ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ಪೊಲೀಸ್ ಆಧಿಕಾರಿ ತಾಹಿರ್ ಖಾನ್ ತಿಳಿಸಿದ್ದಾರೆ.
ಉಗ್ರರು ಬೆಳಿಗ್ಗೆ ಮಾರುವೇಷದಲ್ಲಿ ಕೃಷಿ ವಿದ್ಯಾಲಯಕ್ಕೆ ಪ್ರವೇಶಿಸಿ ದಾಳಿ ನಡೆಸಿದ್ದು, ಘಟನೆಯಲ್ಲಿ 9 ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
2014ರ ಡಿಸೆಂಬರ್‌ನಲ್ಲಿ ತಾಲಿಬಾನ್ ಉಗ್ರ ನಡೆಸಿದ ಗುಂಡಿನ ದಾಳಿಗೆ ಪೇಶಾವರ ಶಾಲೆಯ 134 ಮಕ್ಕಳು ಮೃತಪಟ್ಟಿದ್ದರು. ಇದು ದೇಶದ ಇತಿಹಾಸದಲ್ಲೇ ದೊಡ್ಡ ಮಾರಣಾಂತಿಕ ದಾಳಿ ಎಂದೇ ಕರೆಯಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.