ಶನಿವಾರ, ಫೆಬ್ರವರಿ 27, 2021
20 °C

ರಂಗವೈವಿಧ್ಯಕ್ಕೆ ಕನ್ನಡಿ ಹಿಡಿವ ನಾಟಕೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಂಗವೈವಿಧ್ಯಕ್ಕೆ ಕನ್ನಡಿ ಹಿಡಿವ ನಾಟಕೋತ್ಸವ

‘ಡೆಕ್ಕನ್ ಹೆರಾಲ್ಡ್‌’ ನಾಟಕೋತ್ಸವ ಡಿ.3ರಿಂದ 10ರವರೆಗೆ ನಡೆಯಲಿದೆ. ರಂಗಭೂಮಿಯ ಹೊಸ ಪ್ರಯೋಗಗಳಿಗೆ, ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಈ ನಾಟಕೋತ್ಸವವನ್ನು ಆಯೋಜಿಸಲಾಗಿದೆ. ಈ ಸಂದರ್ಭ ದೇಶ–ವಿದೇಶಗಳ ಖ್ಯಾತ ನಿರ್ದೇಶಕರು ನಿರ್ದೇಶಿಸಿರುವ ಆರು ಪ್ರಸಿದ್ಧ ನಾಟಕಗಳು ರಂಗಪ್ರಿಯರ ಮನತಣಿಸಲಿವೆ.

ಡಿ.3ರಂದು ನಾಟಕೋತ್ಸವದ ಆರಂಭಿಕ ನಾಟಕವಾಗಿ ‘ಮದರ್‌ ಕರೇಜ್‌ ಅ್ಯಂಡ್‌ ಹರ್‌ ಚಿಲ್ಡ್ರನ್‌’ ಪ್ರದರ್ಶನವಾಗಲಿದೆ. ಕ್ವ್ಯಾಸರ್ ತ್ಯಾಕೋರ್‌ ಪದ್ಮಸೆ ಇದನ್ನು ನಿರ್ದೇಶಿಸಿದ್ದಾರೆ. ವೈಯಾಲಿಕಾವಲ್‌ ಚೌಡಯ್ಯ ಸ್ಮಾರಕ ಭವನದಲ್ಲಿ ಸಂಜೆ 7 ಗಂಟೆಗೆ ನಾಟಕ ವೀಕ್ಷಿಸಬಹುದು.

ರಂಗಭೂಮಿಯ ಹೊಸ ಪ್ರತಿಭೆಗಳನ್ನು ಪ್ರೊತ್ಸಾಹಿಸುವ ಸಲುವಾಗಿ ಈ ಬಾರಿಯ ನಾಟಕೋತ್ಸವದಲ್ಲಿ ಕಾಲೇಜು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೂ ವೇದಿಕೆ ಕಲ್ಪಿಸಲಾಗಿದೆ. ಡಿ.4ರಂದು ಸಂಜೆ 5 ಗಂಟೆಗೆ ವಸಂತನಗರದ ಅಲಯನ್ಸ್ ಫ್ರಾನ್ಸೆಯಲ್ಲಿ ‘ಡೆಕ್ಕನ್‌ ಹೆರಾಲ್ಡ್‌’ ಅಂತರಕಾಲೇಜು ನಾಟಕಸ್ಪರ್ಧೆ ನಡೆಯಲಿದೆ. ಇದರಲ್ಲಿ ಕ್ರೈಸ್ಟ್‌ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ‘ದ್ರೌಪದಿ’, ಮೌಂಟ್‌ ಕಾರ್ಮೆಲ್‌ ಕಾಲೇಜಿನ ವಿದ್ಯಾರ್ಥಿಗಳು ‘ಆ್ಯನ್‌ ಅ್ಯಕ್ಟರ್‌ ನೈಟ್‌ಮೇರ್’ ಹಾಗೂ ಸೇಂಟ್ ಜೋಸೆಫ್‌ ಕಾಲೇಜು ವಿದ್ಯಾರ್ಥಿಗಳು ‘ವಾಯ್ಜೆಕ್‌’ ನಾಟಕ ಪ್ರದರ್ಶಿಸಲಿದ್ದಾರೆ.

ಡಿ.5 ರಂದು ಸಂಜೆ 7.30ಕ್ಕೆ ರಂಗಶಂಕರದಲ್ಲಿ ‘ಎ ಲಿಟಲ್‌ ಕಾಮ್‌ ಭಿಪೋರ್‌ ಸ್ಟಾರ್ಮ್’ ಪ್ರದರ್ಶನವಿದೆ. ಥೆರೆಸಿಯಾ ವಾಲ್ಟರ್‌ ಬರೆದಿರುವ ಈ ನಾಟಕವನ್ನು ವಂದನಾ ಪ್ರಭು ನಿರ್ದೇಶಿಸಿದ್ದಾರೆ. ‘ಪದ್ಮಾವತಿ’ ಚಿತ್ರದ ಕುರಿತು ಪರವಿರೋಧದ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಈ ನಾಟಕ ಹೆಚ್ಚು ಪ್ರಸ್ತುತವೆನಿಸುತ್ತದೆ’ ಎನ್ನುತ್ತಾರೆ ನಿರ್ದೇಶಕಿ ವಂದನಾ ಪ್ರಭು.

ಪ್ರಶಾಂತ್ ನಾಯರ್‌ ನಿರ್ದೇಶನದ ‘ಎ ಫನ್ನಿ ಥಿಂಗ್‌ ಕಾಲ್ಡ್‌ ಲೈಫ್‌’ ನಾಟಕವು ಡಿ.8 ರಂದು ರಾತ್ರಿ 8.30ಕ್ಕೆ ಇಂದಿರಾನಗರದ ಗೋಥೆ ಇನ್‌ಸ್ಟಿಟ್ಯೂಟ್‌ನಲ್ಲಿನ ಮ್ಯಾಕ್ಸ್‌ಮುಲ್ಲರ್‌ ಭವನದಲ್ಲಿ ಪ್ರದರ್ಶನಗೊಳ್ಳಲಿದೆ. ಡಿ.9ರಂದು ಸಂಜೆ 7ಕ್ಕೆ ಜೆ.ಪಿ.ನಗರದ ಎಂಎಲ್ಆರ್ ಕನ್ವೆನ್‌ಷನ್ ಕೇಂದ್ರದಲ್ಲಿ ‘ದಿ ವುಮೆನ್‌ ಇನ್ ಮಿ’ ನಾಟಕ ಪ್ರದರ್ಶನವಾಗಲಿದೆ. ಇದನ್ನು ಪವನ್ ಕುಮಾರ್ ನಿರ್ದೇಶಿಸಿದ್ದಾರೆ.

ನಾಟಕೋತ್ಸವದ ಕೊನೆಯದಿನವಾದ ಡಿ.10ರಂದು ಪ್ರಕಾಶ್‌ ಬೆಳವಾಡಿ ನಿರ್ದೇಶನದ ‘ಬಾಯಿಲ್ಡ್‌ ಬೀನ್ಸ್‌ ಆನ್ ಟೋಸ್ಟ್‌’ ಪ್ರದರ್ಶನಗೊಳ್ಳಲಿದೆ. ರಿಚ್ಮಂಡ್‌ ಟೌನ್‌ನ ಗುಡ್‌ಶಫರ್ಡ್‌ ಸಭಾಂಗಣದಲ್ಲಿ ಸಂಜೆ 7ಕ್ಕೆ ನಾಟಕ ಆರಂಭವಾಗಲಿದೆ.

ಆರೂ ನಾಟಕಗಳು ಭಿನ್ನ ವಿಷಯ ವಸ್ತು ಹೊಂದಿದ್ದು, ನೋಡುಗರಿಗೆ ಹೊಸ ಬಗೆಯ ಅನುಭವ ನೀಡಲಿದೆ. ಟಿಕೆಟ್‌ಗಳು bookmyshow.com ವೆಬ್‌ಸೈಟ್‌ನಲ್ಲಿ ಲಭ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.