ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಫಿ ಸಂತೆ’ಯಲ್ಲಿ ಸೇವೆಯ ಘಮ

Last Updated 1 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕಾಫಿತೋಟಗಳಲ್ಲಿ ದುಡಿಯುವ ಮಹಿಳಾ ಕಾರ್ಮಿಕರ ಸಬಲೀಕರಣ ಹಾಗೂ ಅವರ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ಮಹಿಳಾ ಕಾಫಿ ಅಲೆಯನ್ಸ್‌–ಇಂಡಿಯಾ’ವು ಡಿ.1ರಿಂದ 3ರವರೆಗೆ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಕಾಫಿ ಸಂತೆ ಆಯೋಜಿಸಿದೆ.

ಕಾಫಿಪ್ರಿಯರನ್ನು ಪ್ರೋತ್ಸಾಹಿಸುವುದು ಆ ಮೂಲಕ ಕಾಫಿಯನ್ನು ಜನಪ್ರಿಯಗೊಳಿಸುವುದು ಸಂತೆಯ ಉದ್ದೇಶ. ಸಂತೆಯಲ್ಲಿ ಉತ್ತಮ ಗುಣಮಟ್ಟದ ಕಾಫಿಪುಡಿ ಮಾರಾಟ, ಕಾಫಿ ತಯಾರಿಸುವ ಯಂತ್ರಗಳ (ಕಾಫಿ ಮೇಕಿಂಗ್‌ ಮಷಿನ್‌) ಮಾರಾಟ ನಡೆಯಲಿದೆ.

ಸಂತೆಯಲ್ಲಿ ಕಾಫಿ ಬೆಳೆಗಾರರು, ಕೆಫೆಗಳು, ಕಾಫಿ ಮಾರಾಟ ಮಳಿಗೆಗಳು ಇರಲಿವೆ. ಕಾಫಿ ಬೀಜದಿಂದ ತಯಾರಿಸಿದ ಆಭರಣಗಳ ಮಾರಾಟಕ್ಕೂ ವೇದಿಕೆ ಕಲ್ಪಿಸಲಾಗಿದೆ. ಕಾಫಿ ಬೀಜಗಳನ್ನು ಬಳಸಿ ರಚಿಸಿದ ಚಿತ್ರಕಲೆಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.

ಮಕ್ಕಳಿಗೆ ಚಿತ್ರಕಲಾ ಸ್ವರ್ಧೆ ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ವಿಜೇತರಿಗೆ ಶನಿವಾರ (ಡಿ. 2) ಸಂಜೆ 6 ಗಂಟೆಗೆ ಕಾಫಿ ಕ್ಷೇತ್ರ ಸಾಧಕಿಯರು ಪ್ರಶಸ್ತಿ ವಿತರಿಸಲಿದ್ದಾರೆ.

ಭಾನುವಾರ ಮಧ್ಯಾಹ್ನ 2 ಗಂಟೆಗೆ ‘ಪ್ರತಿಭೆ ಮತ್ತು ಕಾಫಿ’ ಕಾರ್ಯಕ್ರಮದಲ್ಲಿ ಮಕ್ಕಳು ಅವರ ಪ್ರತಿಭೆ ಪ್ರದರ್ಶಿಸಲಿದ್ದಾರೆ.  ವಿಶ್ವದಲ್ಲಿ ಕಾಫಿ ಜನಪ್ರಿಯತೆ ಪಡೆದ ಬಗೆ ಕುರಿತು ಮಧ್ಯಾಹ್ನ 3 ಗಂಟೆಗೆ ವಿಷಯ ಪರಿಣಿತರಿಂದ ಸಂವಾದ ಆಯೋಜಿಸಲಾಗಿದೆ. ಸಂಜೆ 4 ಗಂಟೆಗೆ ಕಾಫಿ ಮತ್ತು ಸಂಸ್ಕೃತಿ ಕಾರ್ಯಕ್ರಮದಲ್ಲಿ ಕೊಡಗಿನ ಮಹಿಳೆಯರು ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಲಿದ್ದಾರೆ. ಸಂಜೆ 6 ಗಂಟೆಗೆ ಪದ್ಮಿನಿ ರವಿ ಹಾಗೂ ತಂಡದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.  ಕಾಫಿ ಸಂತೆಯಲ್ಲಿ ಸಂಗ್ರಹಿಸಿದ ಹಣವನ್ನು ಕಾಫಿ ತೋಟದಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಶಿಬಿರ, ಆರೋಗ್ಯವಿಮೆ ಹಾಗೂ ಪೌಷ್ಠಿಕ ಆಹಾರ ವಿತರಣೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಕಾರ್ಯಕ್ರಮದ ಆಯೋಜಕರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT