ಶುಕ್ರವಾರ, ಫೆಬ್ರವರಿ 26, 2021
19 °C

ಅರ್ಜುನ್‌ ಜೊತೆ ರಶ್ಮಿಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರ್ಜುನ್‌ ಜೊತೆ ರಶ್ಮಿಕಾ

ಪ್ರತಿ ಚಿತ್ರದಲ್ಲಿಯೂ ವಿಭಿನ್ನ ಉಡುಗೆ, ಕೇಶವಿನ್ಯಾಸಗಳಿಂದ ಹೊಸತನದೊಂದಿಗೆ ಕಾಣಿಸಿಕೊಳ್ಳುವ ಸ್ಟೈಲಿಶ್‌ ಸ್ಟಾರ್ ಅಲ್ಲು ಅರ್ಜುನ್ ‘ನಾ ಪೇರು ಸೂರ್ಯ’ ಚಿತ್ರದಲ್ಲಿಯೂ ತಮ್ಮ ನಾವೀನ್ಯತೆಯನ್ನು ಕಾಯ್ದುಕೊಂಡಿದ್ದಾರೆ.

ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದ್ದು ಮಿಲಿಟರಿ ಅಧಿಕಾರಿಯ ವೇಶದಲ್ಲಿ ಕಾಣಿಸಿಕೊಂಡಿರುವ ಅಲ್ಲು, ಅಭಿಮಾನಿಗಳಲ್ಲಿ ಚಿತ್ರದ ಬಗೆಗಿನ ನಿರೀಕ್ಷೆ ಹೆಚ್ಚಿಸಿದ್ದಾರೆ. ಫಸ್ಟ್‌ಲುಕ್‌ನಲ್ಲಿ ಸ್ಟೈಲಿಶ್‌ ಸ್ಟಾರ್‌ನ ದೇಶಭ‌ಕ್ತಿ ಎದ್ದು ಕಾಣುತ್ತದೆ. ಚಿತ್ರದಲ್ಲಿ ಭಿನ್ನವಾಗಿ ತೆರೆಮೇಲೆ ರಾರಾಜಿಸುವ ಸಲುವಾಗಿ ಅಮೇರಿಕದಲ್ಲಿ ಒಂದು ತಿಂಗಳು ವಿಶೇಷ ದೈಹಿಕ ತರಬೇತಿ ಪಡೆದ ಫಲವೂ ಇದರಲ್ಲಿ‌ ಬಿಂಬಿತವಾಗಿದೆ.

(ರಶ್ಮಿಕಾ ಮಂದಣ್ಣ)

ಸದ್ಯ ಕನ್ನಡಿಗರಲ್ಲಿ ಈ ಚಿತ್ರದ ಕುರಿತು ಹೊಸ ನಿರೀಕ್ಷೆಯೊಂದು ಮೂಡಿದೆ. ‘ಬೆಳಗೆದ್ದು ಯಾರ ಮುಖವ ನಾನು ನೋಡಿದೆ..., ಅಂದಾನೋ ಅದೃಷ್ಟನೋ...’ ಎನ್ನುತ್ತಾ ಕನ್ನಡಿಗರ ಮನಗೆದ್ದಿದ್ದ ಗುಳಿಕೆನ್ನೆ ಚೆಲುವೆ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುತ್ತಿವೆ ಚಿತ್ರೋದ್ಯಮದ ಮೂಲಗಳು.

ಖ್ಯಾತ ಬರಹಗಾರ ವಕ್ಕನಾಥಮ್ ವಂಶಿ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರೊಂದಿಗೆ ರಶ್ಮಿಕಾ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿವಾಗಿ ಕೇಳಿಬರುತ್ತಿದೆ. ಚಿತ್ರಕ್ಕಾಗಿ ರಶ್ಮಿಕಾ ಈಗಾಗಲೇ ಫೋಟೋಶೂಟ್‌ ಕೂಡ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.