ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನಲು ಬೆಳಕಿನ ಆ್ಯಷಸ್ ಇಂದಿನಿಂದ

Last Updated 1 ಡಿಸೆಂಬರ್ 2017, 19:34 IST
ಅಕ್ಷರ ಗಾತ್ರ

‌ಅಡಿಲೇಡ್‌, ಆಸ್ಟ್ರೇಲಿಯಾ (ರಾಯಿ ಟರ್ಸ್‌): ಆ್ಯಷಸ್ ಟೆಸ್ಟ್ ಇತಿಹಾಸದಲ್ಲಿ ಶನಿವಾರ ಹೊಸ ಅಧ್ಯಾಯ ಸೇರ್ಪಡೆಯಾಗಲಿದೆ. ಈ ಬಾರಿಯ ಸರಣಿಯ ಎರಡನೇ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದೆ. ಹೀಗಾಗಿ ಮೊದಲ ಬಾರಿ ಗುಲಾಬಿ ಬಣ್ಣದ ಚೆಂಡು ಇಲ್ಲಿ ಬಳಕೆಯಾಗಲಿದೆ.

ಮೊದಲ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಸೋತಿರುವ ಇಂಗ್ಲೆಂಡ್‌ ಈ ಪಂದ್ಯದಲ್ಲಿ ಪುಟಿದೇಳಲು ಪ್ರಯತ್ನಿಸಲಿದೆ. ಇನ್ನೊಂದೆಡೆದ ತವರಿನಲ್ಲಿ ಅಮೋಘ ಆಟ ಆಡುತ್ತಿರುವ ಆಸ್ಟ್ರೇಲಿಯಾ ಗೆಲುವಿನ ಓಟ ಮುಂದುವರಿಸಲು ಪ್ರಯತ್ನಿಸಲಿದೆ. ‌

ಸರಣಿ ಆರಂಭಕ್ಕೆ ಮೊದಲು ಎರಡೂ ತಂಡಗಳ ನಾಯಕರು ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗಿದ್ದರು. ಮೊದಲ ಪಂದ್ಯದ ನಂತರವೂ ಕುಹಕಗಳು ಮುಂದುವರಿದಿದ್ದವು. ಇದು ಎರಡನೇ ಪಂದ್ಯದ ಮುನ್ನಾ ದಿನವಾದ ಶುಕ್ರವಾರವೂ ಮುಂದುವರಿದಿದೆ.

ಗಾಬಾದಲ್ಲಿ ಪಂದ್ಯ ಮುಗಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್‌ ಇಂಗ್ಲೆಂಡ್‌ ತಂಡವನ್ನು ಅಪಹಾಸ್ಯ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರವಾಸಿ ತಂಡದ ನಾಯಕ ಜೋ ರೂಟ್‌ ‘ನಮ್ಮ ತಂಡ ಕ್ರಿಕೆಟ್ ಬಗ್ಗೆ ಮಾತ್ರ ಚಿಂತನೆ ನಡೆಸುತ್ತಿದೆ. ಅದರ ಹೊರ ತಾದ ಯಾವುದೇ ವಿಷಯದ ಬಗ್ಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ’ ಎಂದು ಹೇಳಿದರು.

ಪಂದ್ಯದಲ್ಲಿ ಬಲವಾದ ಪೆಟ್ಟು ನೀಡಿ ಸ್ಮಿತ್ ಬಳಗದ ಸದ್ದಡಗಿಸಲು ರೂಟ್ ತಯಾರಿ ನಡೆಸಿದ್ದಾರೆ ಎಂಬುದು ಈ ಮಾತಿನ ಹಿಂದಿರುವ ಮರ್ಮ. ಆದ್ದರಿಂದ ಎರಡನೇ ಪಂದ್ಯದಲ್ಲಿ ಜಿದ್ದಾಜಿದ್ದಿನ ಹೋರಾಟ ಕಂಡುಬರುವ ಸಾಧ್ಯತೆ ಇದೆ.

ರೂಟ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ಮಿತ್‌ ‘ನಾನು ಪತ್ರಿಕಾಗೋಷ್ಠಿಯಲ್ಲಿ ಇಂಗ್ಲೆಂಡ್‌ ತಂಡವನ್ನು ಹಂಗಿಸಿಲ್ಲ. ಅಂದು ನಿರಂತರ ನಗೆ ಸೂಸಿದ್ದಕ್ಕೆ ಬೇರೆ ಕಾರಣವಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT