ಮಂಗಳವಾರ, ಮಾರ್ಚ್ 9, 2021
23 °C

51 ಅಡಿ ಎತ್ತರದ ಗುಂಡಾಂಜನೇಯ ಸ್ವಾಮಿಗೆ ಕುಂಭಾಭಿಷೇಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

51 ಅಡಿ ಎತ್ತರದ ಗುಂಡಾಂಜನೇಯ ಸ್ವಾಮಿಗೆ ಕುಂಭಾಭಿಷೇಕ

ಬೆಂಗಳೂರು: ಬ್ಯಾಟರಾಯನಪುರ ಕ್ಷೇತ್ರವ್ಯಾಪ್ತಿಯ ಕೊಡಿಗೇಹಳ್ಳಿ ಗೇಟ್ ಬಳಿಯ ಗುಂಡಾಂಜನೇಯಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಆಂಜನೇಯಸ್ವಾಮಿಗೆ ವಿಶೇಷ ಅಲಂಕಾರ, ವಿವಿಧ ಪೂಜೆಗಳು ನಡೆದವು. ಭಕ್ತರು ಬೆಳಗ್ಗೆಯಿಂದಲೆ ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದರು.

ಹೆಬ್ಬಾಳದ ಚಂದ್ರಮೌಳೇಶ್ವರ ಭಜನಾ ಮಂಡಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕುಂಭಾಭಿಷೇಕ: ಯಲಹಂಕದ ಸಂತೆ ವೃತ್ತದಲ್ಲಿರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ 51 ಅಡಿ ಎತ್ತರವಿರುವ ಆಂಜನೇಯಸ್ವಾಮಿ ಮೂರ್ತಿಗೆ ಭಕ್ತಾರು ಕ್ರೇನ್‌ ಸಹಾಯದಿಂದ ಕುಂಭಾಭಿಷೇಕ ನೆರವೇರಿಸಿದರು.

ಜಕ್ಕೂರು ಬಡಾವಣೆಯ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲೂ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಬೇಲೂರಿನ ಎಚ್‌.ಎ.ವಸಂತಲಕ್ಷ್ಮಿ ಅವರಿಂದ ‘ಮಾರುತಿ ವಿಜಯ’ ಎಂಬ ಹರಿಕಥೆ, ಅಮೃತಹಳ್ಳಿಯ ಉಭಯಮಾರಮ್ಮ ಭಜನಾಮಂಡಳಿ ಮತ್ತು ರಾಮ ಸಂಗೀತಶಾಲೆಯ ಮಕ್ಕಳಿಂದ ಭಜನೆ ಹಾಗೂ ಉಭಯಮಾರಮ್ಮ ಭರತನಾಟ್ಯ ಕಲಾವೃಂದದವರಿಂದ ಭರತನಾಟ್ಯ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.