7

ಭರತನಾಟ್ಯ ಕಲೆ ಆಧ್ಯಾತ್ಮದ ಸಂಕೇತ: ವಿಶ್ವೇಶತೀರ್ಥ ಸ್ವಾಮೀಜಿ

Published:
Updated:

ಉಡುಪಿ: ಭರತನಾಟ್ಯ ಕಲೆ ಆಧ್ಯಾತ್ಮದ ಸಂಕೇತವಾಗಿದೆ. ಈ ಕಲೆಯಲ್ಲಿ ತನ್ಮಯರಾಗುವ ಮೂಲಕ ಭಗವಂತನ ದರ್ಶನ ಪಡೆಯಬಹುದಾಗಿದೆ ಎಂದು ಪರ್ಯಾಯ ಪೇಜಾವರ ಮಠ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಪರ್ಯಾಯ ಪೇಜಾವರ ಮಠದವ ಆಶ್ರಯದಲ್ಲಿ ರಾಧಾಕೃಷ್ಣ ನೃತ್ಯನಿಕೇತನ ಸಂಸ್ಥೆ ಆಯೋಜಿಸಿದ್ದ ಭರತ ಮುನಿ ಜಯಂತ್ಯುತ್ಸವವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಭರತನಾಟ್ಯ ಕಲೆಯನ್ನು ದೇಶದ ಮೂಲೆ ಮೂಲೆಗೆ ತಲುಪಿಸುವಲ್ಲಿ ಭರತ ಮುನಿ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಕಲೆ, ಸಂಸ್ಕೃತಿಗೆ ವಿಶೇಷವಾದ ಆದ್ಯತೆ ನೀಡಿದ ಭರತ ಮುನಿ ಜಯಂತಿಯನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.

ವಿದುಷಿ ಕೆ.ವಸಂತಿ ರಾಮ್‌ ಭಟ್‌ ಮತ್ತು ವಿದ್ವಾನ್‌ ಶ್ರೀನಿವಾಸ್‌ ಭಟ್‌ ಅವರಿಗೆ ಭರತ ಪ್ರಶಸ್ತಿ ಹಾಗೂ ಆದ್ವಿಕಾ ಶೆಟ್ಟಿ, ದಿಶಾ, ಕಾವ್ಯ ಹೆಗಡೆ, ಶ್ರೀಪದ ರಾವ್‌ ಅವರಿಗೆ ಗರು ರಾಧಕೃಷ್ಣಾನುಗ್ರಹ ಪ್ರಶಸ್ತಿಯನ್ನು ಸ್ವಾಮೀಜಿ ಪ್ರದಾನ ಮಾಡಿದರು.

ಮಣಿಪಾಲದ ಮುನಿಯಾಲ್ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಕಾಲೇಜು ಪ್ರಾಶುಂಪಾಲ ಡಾ.ಬಿ. ಸತ್ಯನಾರಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪೂರ್ಣಿಮಾ, ವಿದುಷಿ ಕೆ. ವಸಂತಿ ರಾಮ್‌ ಭಟ್‌, ವಿದ್ವಾನ್‌ ಶ್ರೀನಿವಾಸ್‌ ಭಟ್‌ ಆದ್ವಿಕಾ ಶೆಟ್ಟಿ, ದಿಶಾ, ಕಾವ್ಯ ಹೆಗಡೆ, ಶ್ರೀಪದ ರಾವ್‌ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry