ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಕೃಷ್ಣ ಪರಮಹಂಸರ ಹೆಸರು ನಾಮಕರಣ

Last Updated 2 ಡಿಸೆಂಬರ್ 2017, 5:41 IST
ಅಕ್ಷರ ಗಾತ್ರ

ಶಿವಮೊಗ್ಗ : ರಾಮಕೃಷ್ಣ ಪರಮಹಂಸರು ಮನುಷ್ಯಕುಲಕ್ಕೆ ದಾರಿದೀವಿಗೆಯಾಗಿದ್ದಾರೆ ಎಂದು ಪಾಲಿಕೆ ಸದಸ್ಯ ಐಡಿಯಲ್ ಗೋಪಾಲಕೃಷ್ಣ ಹೇಳಿದರು. ತಿಲಕ್‌ನಗರದ ಎರಡನೇ ತಿರುವಿಗೆ ರಾಮಕೃಷ್ಣ ಪರಮಹಂಸರ ಹೆಸರಿನ ನಾಮಕರಣ ಫಲಕ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಮಕೃಷ್ಣ ಪರಮಹಂಸರ ವಿಚಾರಧಾರೆಗಳು ಸಾರ್ವಕಾಲಿಕ. ಇಂತಹವರ ಹೆಸರನ್ನು ರಸ್ತೆಗೆ ನಾಮಕರಣ ಮಾಡುವ ಮೂಲಕ ಅವರನ್ನು ಸ್ಮರಿಸುವ ಕೆಲಸ ಆಗಿದೆ. ನಗರದ ಅಭಿವೃದ್ದಿಗೆ ಪರಮಹಂಸರಂತಹ ಮಹಾನ್ ದಾರ್ಶನಿಕರ ಸ್ಮರಣೆ ಅಗತ್ಯವಿದೆ.

ಪರಮಹಂಸರ ಅನುಯಾಯಿಗಳಾಗಿ ಜಗತ್ತಿಗೆ ಬೆಳಕು ತಂದ ಸ್ವಾಮಿ ವಿವೇಕಾನಂದ ಅವರ ಪ್ರತಿಮೆಯನ್ನು ನಗರದಲ್ಲಿ ಸ್ಥಾಪಿಸಲು ಪಾಲಿಕೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಂಗಳೂರಿನ ರಾಮಕೃಷ್ಣಪರಮಹಂಸ ಮಠದ ಸ್ವಾಮಿ ಜಿತಕಾಮನಂದಜೀ ಮತ್ತು ಗದಗದ ಸ್ವಾಮಿ ಶ್ರೀ ನಿರ್ಭಯಾನಂದ ಸ್ವಾಮೀಜಿ ರಸ್ತೆ ನಾಮಕರಣ ಫಲಕವನ್ನು ಅನಾವರಣಗೊಳಿಸಿದರು.

ತಿಲಕ್ ನಗರದ ನಿವಾಸಿಗಳಾದ ಎಂ.ವಿ.ಸೂರ್ಯನಾರಾಯಣ, ಎಚ್.ವಿ.ಭವೇಂದ್ರಕುಮಾರ್, ಪ್ರೇಮ್ ಕುಮಾರ್. ಕೃಷ್ಣಮೂರ್ತಿ, ಎನ್.ರವಿಕುಮಾರ್, ಗೋಪಾಲಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT