7

ಡಿ.20ರಂದು ಉದ್ಯೋಗ ಮೇಳ

Published:
Updated:

ಆಳಂದ: ತಾಲ್ಲೂಕಿನ ನಿರುದ್ಯೋಗಿ ಯುವಕರಿಗೆ ಅವರ ಅರ್ಹತೆ ಅನುಗುಣ ಉದ್ಯೋಗ ನೀಡುವ ಉದ್ದೇಶದಿಂದ ಕ್ಯಾಡ್‌ಮ್ಯಾಕ್ಸ್ ಸಂಸ್ಥೆಯು ಡಿ. 20ರಂದು ಆಳಂದ ಎ.ವಿ.ಪಾಟೀಲ ಪದವಿ ಕಾಲೇಜಿನಲ್ಲಿ ಬೃಹತ್‌ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಅರುಣಕುಮಾರ ಸಿ.ಪಾಟೀಲ ತಿಳಿಸಿದರು.

ಪಟ್ಟಣದ ಕ್ಯಾಡ್‌ಮ್ಯಾಕ್ಸ್ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗ ಮೇಳದಲ್ಲಿ 40ಕ್ಕೂ ಅಧಿಕ ಕಂಪೆನಿ, ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಆಯ್ಕೆ ನಡೆಯಲಾಗುದು ಎಂದರು.

ತಾಲ್ಲೂಕಿನ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಪದವಿ ಹಾಗೂ ಸ್ನಾತಕೋತ್ತರ ಪದವೀಧರರು ಡಿ.19ರೊಳಗೆ ಕ್ಯಾಡ್‌ಮ್ಯಾಕ್ಸ್‌ ಕಚೇರಿಯಲ್ಲಿ ತಮ್ಮ ಹೆಸರು ನೋಂದಾಯಿಸಲು ತಿಳಿಸಿದರು.

ಹೆಸರು ನೋಂದಾ ಯಿಸಿಕೊಂಡವರು ಸಂದರ್ಶನ ಹೇಗೆ ಎದುರಿಸಬೇಕು. ಸಂವಹನ ಕೌಶಲದ ಕುರಿತು ಎಲ್ಲರಿಗೂ ಡಿ.19ರಂದು ಉಚಿತ ತರಬೇತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry