ಕಾಂಗ್ರೆಸ್‌ಗೆ ತಕ್ಕಪಾಠ ಕಲಿಸಲು ಪರಿವರ್ತನೆ ಯಾತ್ರೆ

6

ಕಾಂಗ್ರೆಸ್‌ಗೆ ತಕ್ಕಪಾಠ ಕಲಿಸಲು ಪರಿವರ್ತನೆ ಯಾತ್ರೆ

Published:
Updated:

ಅಫಜಲಪುರ: ಇಲ್ಲಿನ ಮಹಾಂತೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಬಿಜೆಪಿ ಪಕ್ಷದ ಅಧಿಕೃತವಾಗಿ ಪರಿವರ್ತನಾ ಯಾತ್ರೆ ಡಿ.3ರಂದು ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಶಾಸಕ ಎಂ.ವೈ.ಪಾಟೀಲ ಹಾಗೂ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸೂರ್ಯಕಾಂತ ನಾಕೇದಾರ ತಿಳಿಸಿದರು.

ಡಿ.3ರಂದು ಸಿಂದಗಿ ತಾಲ್ಲೂಕಿನಲ್ಲಿ ಪರಿವರ್ತನಾ ಯಾತ್ರೆ ಅಫಜಲಪುರಕ್ಕೆ ಮಧ್ಯಾಹ್ನ 2 ಗಂಟೆಗೆ ಆಗಮಿಸಲಿದ್ದು, 1ಕಿ.ಮೀ ದೂರದಿಂದ ಪರಿವರ್ತನಾ ಯಾತ್ರೆಗೆ ಸ್ವಾಗತ ಕೋರಿ ವಿವಿಧ ಜನಪದ ನೃತ್ಯ, ಡೊಳ್ಳು ಮತ್ತು ಬೈಕ್‌ ರ್‍ಯಾಲಿ ಮುಖಾಂತರ ಯಾತ್ರೆ ನಡೆಯುವ ಮಹಾಂತೇಶ್ವರ ವಿದ್ಯಾವರ್ಧಕ ಸಂಘಕ್ಕೆ ಕರೆ ತರಲಾಗುವದು ಎಂದು ತಿಳಿಸಿದರು.

ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರು, ರಾಜ್ಯದ ನಾಯಕರು, ಜಿಲ್ಲಾ ನಾಯಕರು ಭಾಗವಹಿಸುವರು. ಇದರಿಂದ ತಾಲ್ಲೂಕು ಮತ್ತು ರಾಜ್ಯದ ಪರಿವರ್ತನೆಯಾಗಲಿದೆ ಎಂದು ಅವರು ತಿಳಿಸಿದರು.

ಬಿಜೆಪಿ ರಾಜ್ಯ ಹಿಂದುಳಿದ ಸಂಘದ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ ಮಾತನಾಡಿ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಇರುವಾಗ ವಸತಿ ಸಚಿವ ಸೋಮಣ್ಣನವರು ತಾಲ್ಲೂಕಿಗೆ 10 ಸಾವಿರ ಮನೆಗಳನ್ನು ಮಂಜೂರು ಮಾಡಿದ್ದರು. ಆದರೆ ಇನ್ನೂವರೆಗೂ ಶಾಸಕ ಮಾಲೀಕಯ್ಯ ಗುತ್ತೇದಾರ ಅವರಿಗೆ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ ಆದರೆ ಮತ್ತೆ ಮನೆ ಕೊಡುವದಾಗಿ ಭರವಸೆ ನೀಡುತ್ತಿದ್ದಾರೆ. ಇದು ಕೇವಲ ಚುನಾವಣೆ ಗಿಮಿಕ್ ಆಗಿದೆ ಎಂದು ಅವರು ಆರೋಪಿಸಿದರು.

ಪರಿವರ್ತನೆ ಯಾತ್ರೆಯಲ್ಲಿ 25ರಿಂದ30 ಸಾವಿರ ಜನರು ಭಾಗವಹಿ ಸಲಿದ್ದಾರೆ. ವಾಹನ ನಿಲುಗಡೆಗೆ ಪತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ದತ್ತ ಜಯಂತಿ ಇರುವದರಿಂದ ಅಫಜಲಪುರ, ಸೋಲಾಪುರ ರಸ್ತೆ ಯನ್ನು ಬಂದ್ ಮಾಡಿ ಬೈಪಾಸ್ ರಸ್ತೆ ವ್ಯವಸ್ಥೆ ಮಾಡಲಾಗಿದೆ. ಜನರು ಸಹಕರಿ ಸಬೇಕು ಎಂದು ಅವರು ತಿಳಿಸಿದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಸೂರ್ಯಕಾಂತ ನಾಕೇದಾರ, ಜಿ.ಪಂ ಸದಸ್ಯ ಅರುಣಗೌಡ ಪಾಟೀಲ, ಕಾರ್ಯದರ್ಶಿ ಶರಣು ಕುಂಬಾರ, ಪುರಸಭೆ ಸದಸ್ಯ ವಿನೋದ ರಾಠೋಡ, ಬಸವರಾಜ ಪಾಟೀಲ ಅಳ್ಳಗಿ, ಅಶೋಕ ಬಗಲಿ, ಶಿವಾನಂದ ಗಾಡಿ ಸಾಹುಕಾರ, ಮಲ್ಲಿಕಾರ್ಜುನ ನಿಂಗದಳ್ಳಿ, ರಮೇಶ ನೀಲಗಾರ, ಶ್ರೀಶೈಲ ಪಾಟೀಲ, ದತ್ತು ಗಾಣೂರ, ಚಂದಮ್ಮ ಪಾಟೀಲ, ಅಪ್ಪಾಶಾ ಬುರಲಿ, ಚಿದಾನಂದ ಮಠ, ಭೀಮರಾವ್‌ ಗೌರ, ಚಂದು ಕರಜಗಿ, ರಾಜು ಪಾಟೀಲ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry