ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿಗಳ ಅಸಹಜ ಸಾವು: ಆತಂಕ

Last Updated 2 ಡಿಸೆಂಬರ್ 2017, 7:27 IST
ಅಕ್ಷರ ಗಾತ್ರ

ಮುಧೋಳ: ನಗರದ ಬಡಾವಣೆಗಳಲ್ಲಿ ಹಂದಿಗಳು ಅಸಹಜವಾಗಿ ಸಾವನ್ನಪ್ಪುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಕಳೆದ 15 ದಿನಗಳಲ್ಲಿ ನೂರಾರು ಹಂದಿಗಳು ಮರಣಹೊಂದಿವೆ.

‘ನಗರದಲ್ಲಿ ಹಂದಿಗಳ ಸಾವು ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ತಿಳಿಯುತ್ತಿಲ್ಲ. ಇದರಿಂದ ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಜನರ ಆರೋಗ್ಯ ಕುರಿತು ನಗರಸಭೆ ಕ್ರಮಕೈಗೊಳ್ಳಬೇಕು’ ಎಂದು ಬಿಜೆಪಿ ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಪ್ರದೀಪ ನಿಂಬಾಳಕರ ಆಗ್ರಹಿಸಿದ್ದಾರೆ.

‘ನಗರದಲ್ಲಿ ಹಂದಿಗಳ ಸಂಖ್ಯೆ ಅಧಿಕವಾಗಿದೆ. ಮಲ್ಲಮ ನಗರ, ವಿನಾಯಕ ನಗರ, ಸಿದ್ದರಾಮೇಶ್ವರ ಕಾಲೊನಿ, ಯಶವಂತ ನಗರ, ಹೌಸಿಂಗ್ ಕಾಲೊನಿ, ಬಕ್ಷಿ ಪ್ಲಾಟ್‌ ಬಡಾವಣೆಗಳಲ್ಲಿ 15 ದಿನಗಳಿಂದ ನಿತ್ಯ ಹಂದಿಗಳು ಸಾಯುತ್ತಿರುವುದರಿಂದ ದುರ್ಗಂಧದ ವಾತಾವರಣ ನಿರ್ಮಾಣವಾಗಿದೆ. ಹಂದಿಗಳ ಸಾವಿನಿಂದ ರೋಗ ಹರಡುವ ಭೀತಿಯಿಂದ ಜನರಲ್ಲಿ ಆತಂಕ ಉಂಟಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ನಗರಸಭೆ ಆಯುಕ್ತ ರಮೇಶ ಜಾಧವ ಅವರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ ‘ನಗರದ ಬಡಾವಣೆಗಳಲ್ಲಿ 10 ದಿನಗಳಿಂದ ನಿತ್ಯ 10ರಿಂದ 50ರವರೆಗೆ ಹಂದಿಗಳ ಸಾವು ಆಗುತ್ತಿದೆ. ಹಂದಿಗಳನ್ನು ತೆಗ್ಗು ತೆಗೆದು ಮುಚ್ಚಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ವಾಹನ ಮಾಡಲಾಗಿದ್ದು, ಬೆಳಗ್ಗೆ 6ರಿಂದ ಸಂಜೆಯವರೆಗೆ ಸತ್ತ ಹಂದಿಗಳ ಹುಡುಕಾಟ ಹಾಗೂ ಸಾರ್ವಜನಿಕರಿಂದ ದೂರವಾಣಿ ಮೂಲಕ ಮಾಹಿತಿ ಪಡೆದು, ಅವುಗಳನ್ನು ತಕ್ಷಣ ವಿಲೇವಾರಿ ಮಾಡಲಾಗುತ್ತಿದೆ’ ಎಂದು.

‘ಅಲ್ಲದೆ ಅಸಹಜವಾಗಿ ಹಂದಿಗಳ ಸಾವಿನ ಕುರಿತು ನಗರದ ಪಶು ವೈದ್ಯರಿಗೆ ಮಾಹಿತಿ ನೀಡಲಾಗಿದೆ. ಬೆಂಗಳೂರಿನಿಂದ ಬಂದ ತಜ್ಞರು ಸತ್ತ ಹಾಗೂ ಜೀವಂತ ಹಂದಿಗಳನ್ನು ಪರೀಕ್ಷಿಸಿದ್ದಾರೆ. ವೈರಲ್‌ನಿಂದ ಸಾವು ಸಂಭವಿಸಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಯಾವ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಹಂದಿಗಳ ಸಾವು ಸಂಭವಿಸಿದರೆ ತಕ್ಷಣ ನಗರಸಭೆ ಸಂಪರ್ಕಿಸಬೇಕ’ ಎಂದು ಆಯುಕ್ತರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT