7

‘ಮದುವೆ ಬದಲು ಶಿಕ್ಷಣಕ್ಕೆ ಹಣ ಖರ್ಚು ಮಾಡಿ’

Published:
Updated:

ವಿಜಯಪುರ : ಅದ್ದೂರಿಯಾದ ಮದುವೆಗಳನ್ನು ಮಾಡುವ ಬದಲಿಗೆ ಹಣವನ್ನು ಮಕ್ಕಳ ಇಡೀ ಶಿಕ್ಷಣಕ್ಕೆ ಖರ್ಚು ಮಾಡಿದರೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ ಎಂದು ಅಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ತ ವಧು–ವರರ ವಿವಾಹ ವೇದಿಕೆಯ ಅಧ್ಯಕ್ಷ ಜೆ.ಎನ್.ನಾಗರಾಜಪ್ಪ ಹೇಳಿದರು.

ಇಲ್ಲಿನ ಮಹಂತಿನಮಠದಲ್ಲಿ ಆಯೋಜಿಸಿದ್ದ ನಗರ್ತ ವಧು–ವರರ ಮುಖಾಮುಖಿ ಸಮಾವೇಶದಲ್ಲಿ ಅವರು ಮಾತನಾಡಿದರು. ಸಾಮೂಹಿಕ ವಿವಾಹಗಳಿಂದ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಸಾಲ ಮಾಡುವುದು ತಪ್ಪುತ್ತದೆ.

ಸರಳ ವಿವಾಹಗಳನ್ನು ಮಾಡುವುದರಿಂದ ನೂತನ ವಧು–ವರರ ಜೀವನ ಮಾದರಿಯಾಗಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಸರ್ವರಿಗೆ ಸಮಬಾಳು ನೀಡಲು ಸಮಾನ ಮನಸ್ಸುಗಳು ಇರಬೇಕು. ಆಗ ಸಂಸಾರದಲ್ಲಿ ಸಮಬಾಳು ಕಾಣಬಹುದು. ಇದರಿಂದ ಸಮಾಜದಲ್ಲಿ ಸಹಬಾಳ್ವೆ ನಿರ್ಮಾಣವಾಗುತ್ತದೆ ಎಂದರು.

ಸಮಾಜದ ಪರವಾಗಿ ಕೆಲಸ ಮಾಡುವಂತಹ ಸಂಘ ಸಂಸ್ಥೆಗಳು ಇಂತಹ ಉತ್ತಮ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮಾದರಿಯಾಗಬೇಕು ಎಂದರು. ಉಪಾಧ್ಯಕ್ಷ ಎಸ್.ರುದ್ರಮೂರ್ತಿ, ಪಿ.ಬಸವರಾಜು, ಕಾರ್ಯದರ್ಶಿ ಶಿವಣ್ಣ(ಬೇಕರಿ), ಶೈಲಾಶಾಂತವೀರಣ್ಣ, ಚಂದ್ರಕಲಾರುದ್ರಮೂರ್ತಿ, ವಿ.ಶಿವಕುಮಾರ್, ವಿ.ವಿಶ್ವನಾಥ್, ಎಂ.ಮಂಜುನಾಥ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry