7

‘ಹಬ್ಬಗಳು ಸೌಹಾರ್ದದ ಪ್ರತೀಕವಾಗಲಿ’

Published:
Updated:

ಡಂಬಳ: ‘ಹಬ್ಬಗಳಿಂದ ಸಮಾಜದಲ್ಲಿ ಸಾಮರಸ್ಯ ನೆಲೆಸಬೇಕು. ಎಲ್ಲ ಧರ್ಮದವರು ಎಲ್ಲ ಹಬ್ಬಗಳನ್ನು ಪ್ರೀತಿ, ಸೌಹಾರ್ದದಿಂದ ಆಚರಿಸಬೇಕು’ ಎಂದು ಸಿಪಿಐ ಮಂಜುನಾಥ ಆರ್. ನಡುವಿನಮನಿ ಹೇಳಿದರು. ಡಂಬಳ ಗ್ರಾಮದಲ್ಲಿ ನಡೆದ ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಗಂಗಾವತಿ, ಡಿ.ಬಿ.ಡೊಲಿ ಮಾತನಾಡಿ, ‘ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅವರ ಸಾಮಾಜಿಕ ಕಾರ್ಯಗಳಿಂದ ಡಂಬಳ ಕೋಮು ಸೌಹಾರ್ದಕ್ಕೆ ದೇಶದಲ್ಲೇ ಹೆಸರು ಪಡೆದಿದೆ. ಇಲ್ಲಿ ಎಲ್ಲ ಧರ್ಮದವರು ಸೇರಿ ಎಲ್ಲ ಹಬ್ಬಗಳನ್ನು ಪ್ರೀತಿ, ವಿಶ್ವಾಸ, ಹಾಗೂ ಸೌಹಾರ್ದದಿಂದ ಆಚರಿಸುತ್ತಾರೆ’ ಈ ವರ್ಷವೂ ಆ ಸಂಪ್ರದಾಯ ಮುಂದುವರಿಯಲಿದೆ ಎಂದು ಹೇಳಿದರು.

ಹುಸೇನಸಾಬ್ ಮೂಲಿಮನಿ, ಸುರೇಶ ಗಡಗಿ, ಮುರ್ತುಜಾ ಮೂಲಿಮನಿ, ನಿಂಗಪ್ಪ ಗೋವಿನಕೊಪ್ಪ, ಮುತ್ತಣ್ಣಕೊಂತಿಕೊಲ್ಲ ಮಲ್ಲಿಕಾರ್ಜುನ ಪ್ಯಾಟಿ ಸಭೆಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry