ಉತ್ತರ ಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ‘ಬಿಜೆಪಿ’ ಗೆಲುವಿಗೆ ‘ಇವಿಎಂ’ ಕಾರಣ: ಅಖಿಲೇಶ್ ಯಾದವ್

ಲಖನೌ: ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯು ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ಬಳಸಿರುವ ವಲಯಗಳಲ್ಲಿ ಮಾತ್ರ ಹೆಚ್ಚು ಮತಗಳನ್ನು ಪಡೆಯಲು ಸಫಲವಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟೀಕಿಸಿದ್ದಾರೆ.
‘ಬ್ಯಾಲೆಟ್ ಪೇಪರ್ ಬಳಸಿರುವ ಕಡೆ ಬಿಜೆಪಿ ಕೇವಲ ಶೇ 15ರಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಇವಿಎಂ ಬಳಕೆಯಾಗಿರುವ ಪ್ರದೇಶಗಳಲ್ಲಿ ಶೇ 46ರಷ್ಟು ಗೆಲುವು ಪಡೆದಿದೆ’ ಎಂದು ಅಖಿಲೇಶ್ ಯಾದವ್ ಶನಿವಾರ ಟ್ವೀಟಿಸಿದ್ದಾರೆ.
BJP has only won 15% seats in Ballot paper areas and 46% in EVM areas.
— Akhilesh Yadav (@yadavakhilesh) December 2, 2017
ಅಖಿಲೇಶ್ ಈ ಸಂಬಂಧ ಪೂರ್ಣ ಮಾಹಿತಿ ನೀಡದಿದ್ದರೂ ಮತದಾನ ಪ್ರಕ್ರಿಯೆಯಲ್ಲಿ ಇವಿಎಂ ಬಳಕೆ ಬಗೆಗಿನ ಚರ್ಚೆಯನ್ನು ಮತ್ತೆ ಸೃಷ್ಟಿಸಿದೆ.
ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 16 ಪಾಲಿಕೆಗಳ ಪೈಕಿ 14ರಲ್ಲಿ ಬಿಜೆಪಿ ಜಯಗಳಿಸಿದೆ. 1300 ಪುರಸಭಾ ವಾರ್ಡ್ಗಳ ಪೈಕಿ 596ರಲ್ಲಿ, 198 ನಗರ ಪಾಲಿಕೆಗಳಲ್ಲಿ 70 ಹಾಗೂ 438 ನಗರ ಪಂಚಾಯಿತಿಗಳ ಪೈಕಿ 100 ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ.
ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.