ಬೆಂಗಳೂರು–ಮೈಸೂರು ಮಾರ್ಗದಲ್ಲಿ ಹಳಿ ದುರಸ್ತಿ: ರೈಲು ಪ್ರಯಾಣದಲ್ಲಿ ವ್ಯತ್ಯಯ

ರಾಮನಗರ: ಚನ್ನಪಟ್ಟಣ ಹಾಗೂ ಶೆಟ್ಟಿಹಳ್ಳಿ ನಡುವಿನ ಹಳಿಗಳ ದುರಸ್ತಿ ಕಾರ್ಯದಿಂದಾಗಿ ಶನಿವಾರ ಮಧ್ಯಾಹ್ನ ಸುಮಾರು ಎರಡು ಗಂಟೆ ಕಾಲ ಪ್ರಯಾಣದಲ್ಲಿ ವ್ಯತ್ಯಯವಾಯಿತು.
ಶೆಟ್ಟಿಹಳ್ಳಿ ಬಳಿ ಮಾಲ್ಗುಡಿ ಎಕ್ಸ್‌ಪ್ರೆಸ್, ಚನ್ನಪಟ್ಟಣ ನಿಲ್ದಾಣದಲ್ಲಿ ಟಿಪ್ಪು ಎಕ್ಸ್‌ಪ್ರೆಸ್ ಹಾಗೂ ರಾಮನಗರ ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲುಗಳು ಮಧ್ಯಾಹ್ನ 3ರಿಂದ ಸಂಜೆ 5.30ರ ವರೆಗೂ ನಿಂತಿದ್ದವು. ನಂತರದಲ್ಲಿ ಎಲ್ಲ ರೈಲುಗಳ ಪ್ರಯಾಣ ಮುಂದುವರಿಯಿತು.
ಪ್ರಯಾಣಿಕರ ಪರದಾಟ: ಏಕಾಏಕಿ ರೈಲುಗಳು ಸಂಚಾರ ಸ್ಥಗಿತಗೊಳಿಸಿದ ಪರಿಣಾಮ ನೂರಾರು ಪ್ರಯಾಣಿಕರು ಪರದಾಡಿದರು.
ರಜೆ ದಿನವಾಗಿದ್ದರಿಂದ ಬೆಂಗಳೂರು- ಮೈಸೂರು ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ತೆರಳುತ್ತಿದ್ದರು. ರೈಲುಗಳು ನಿಂತ ಕಾರಣ ಕೆಲವರು ಬಸ್ ನಿಲ್ದಾಣಗಳತ್ತ ತೆರಳಿದರೆ, ಇನ್ನೂ ಕೆಲವರು ರೈಲು ನಿಲ್ದಾಣಗಳಲ್ಲಿಯೇ ಅನಿವಾರ್ಯವಾಗಿ ಕಾಲ ಕಳೆದರು.
ಸೂಕ್ತ ಮಾಹಿತಿ ನೀಡದ ರೈಲ್ವೆ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ರೈಲ್ವೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಇದೊಂದು ಪೂರ್ವ ನಿಗದಿತ ಕಾಮಗಾರಿ ಆಗಿದ್ದು, ಮೊದಲೇ ಮಾಹಿತಿ ನೀಡಲಾಗಿತ್ತು ಎಂದು ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.