‘ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಿ’

ವಾಷಿಂಗ್ಟನ್: ಭಯೋತ್ಪಾದಕರ ಸ್ವರ್ಗ ಎಂಬ ಹಣೆಪಟ್ಟಿ ಕಿತ್ತುಹಾಕಿ, ತಮ್ಮ ಹಿತ ಕಾಯ್ದುಕೊಳ್ಳುವ ದೃಷ್ಟಿಯಿಂದ ಪಾಕಿಸ್ತಾನವು ಇನ್ನಷ್ಟು ಕ್ರಮ ಕೈಗೊಳ್ಳಬೇಕು ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಹೇಳಿದ್ದಾರೆ.
ರಕ್ಷಣಾ ಕಾರ್ಯದರ್ಶಿಯಾಗಿ ಇದೇ ಮೊದಲ ಬಾರಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ‘ನಾವು ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ ಎಂಬ ಪಾಕಿಸ್ತಾನ ಮುಖಂಡರ ಕೂಗನ್ನು ನಾವು ಅಫ್ಗಾನಿಸ್ತಾನದಲ್ಲಿ ಕೇಳುತ್ತೇವೆ. ಇದೇ ಮಾತು ಅವರದೇ ರಾಷ್ಟ್ರದ ನೀತಿಯಲ್ಲೂ ಪ್ರತಿಧ್ವನಿಸಲಿ ಎಂಬುದು ನನ್ನ ನಿರೀಕ್ಷೆ. ಏಕೆಂದರೆ ಪಾಕಿಸ್ತಾನದಲ್ಲಿ ಉಗ್ರರಿಂದಾಗಿ ಸಾಕಷ್ಟು ಸಾವುನೋವು ಉಂಟಾಗಿದೆ’ ಎಂದು ಅವರು ಶನಿವಾರ ಹೇಳಿದ್ದಾರೆ.
ಮ್ಯಾಟಿಸ್ ಅವರು ಶುಕ್ರವಾರ ಈಜಿಪ್ಟ್, ಜೋರ್ಡನ್, ಪಾಕಿಸ್ತಾನ ಮತ್ತು ಕುವೈತ್ ಪ್ರವಾಸವನ್ನು ಪ್ರಾರಂಭಿಸಿದ್ದು, ಸೋಮವಾರ ಅವರು ಇಸ್ಲಾಮಾಬಾದ್ ತಲುಪಲಿದ್ದಾರೆ.
ಪ್ರವಾಸದ ವೇಳೆ ಅವರು ಮಧ್ಯ ಪ್ರಾಚ್ಯ, ಪಶ್ಚಿಮ ಆಫ್ರಿಕಾ ಹಾಗೂ ದಕ್ಷಿಣ ಆಫ್ರಿಕಾದೊಂದಿಗಿನ ನಿರಂತರ ಸಹಭಾಗಿತ್ವದ ಬಗ್ಗೆ ಅಮೆರಿಕದ ಬದ್ಧತೆಯನ್ನು ಮತ್ತೊಮ್ಮೆ ಸಾರಲಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.