ಭಾನುವಾರ, ಮಾರ್ಚ್ 7, 2021
19 °C

ಪೇಟೆಯಲ್ಲಿ ಚಂಚಲ ವಹಿವಾಟು

ಪಿಟಿಐ Updated:

ಅಕ್ಷರ ಗಾತ್ರ : | |

ಪೇಟೆಯಲ್ಲಿ ಚಂಚಲ ವಹಿವಾಟು

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಈ ವಾರ ಚಂಚಲ ವಹಿವಾಟು ನಡೆಯಿತು. ಸೆಪ್ಟೆಂಬರ್ ತ್ರೈಮಾಸಿಕದ ಜಿಡಿಪಿ ಅಂಕಿ–ಅಂಶದ ಬಗ್ಗೆ ಮೂಡಿದ್ದ ಅನಿಶ್ಚಿತ ಸ್ಥಿತಿಯಿಂದ ಸೂಚ್ಯಂಕಗಳು ಹೆಚ್ಚು ಇಳಿಕೆ ಕಾಣುವಂತಾಯಿತು.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಚೇತರಿಕೆ ಹಾದಿಗೆ ಮರಳಿದೆ. ಹೀಗಿದ್ದರೂ ವಿತ್ತೀಯ ಕೊರತೆ ಅಂತರ ಹೆಚ್ಚಾಗಿರುವುದು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಅಕ್ಟೋಬರ್‌ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು 2017–18ನೇ ಹಣಕಾಸು ವರ್ಷದ ಬಜೆಟ್‌ ಅಂದಾಜಿನ ಶೇ 96.1ರಷ್ಟಾಗಿದೆ. ಇದರ ಜತೆಗೆ ಸರ್ಕಾರಿ ಬಾಂಡ್‌ಗಳ ಸೆಪ್ಟೆಂಬರ್ ತಿಂಗಳ ವಾಯಿದಾ ವಹಿವಾಟು ಗುರುವಾರ ಅಂತ್ಯವಾಗುವುದು ಸಹ ಮಾರಾಟದ ಒತ್ತಡ ಸೃಷ್ಟಿಸಿತು.

33,640 ಅಂಶಗಳಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕದ (ಬಿಎಸ್‌ಇ) ವಾರದ ವಹಿವಾಟು ಆರಂಭವಾಯಿತು. 33,770 ಅಂಶಗಳ ಕನಿಷ್ಠ ಮತ್ತು 33,978 ಅಂಶಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. ಆರು ದಿನಗಳ ವಹಿವಾಟಿನಲ್ಲಿ 846 ಅಂಶ ಕುಸಿತ ಕಂಡು, 32,832 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 267 ಅಂಶ ಇಳಿಕೆ ಕಂಡು, 10,121 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.ನವೆಂಬರ್ ತಿಂಗಳಿನಲ್ಲಿ ವಾಹನ ಮಾರಾಟ ಎರಡಂಕಿ ಪ್ರಗತಿ ದಾಖಲಿಸಿದೆ. ಈ ಸುದ್ದಿಯಿಂದ ಕೆಲವು ವಾಹನ ತಯಾರಿಕಾ ಕಂಪನಿಗಳ ಷೇರುಗಳ ಮೌಲ್ಯ ಹೆಚ್ಚಾಗಿದೆ. ಮಾರುತಿ ಸುಜುಕಿ ಇಂಡಿಯಾ ಶೇ 1.41 ರಷ್ಟು ಏರಿಕೆ ಕಂಡಿದ್ದು, ಪ್ರಗತಿ ಷೇರಿನ ಬೆಲೆ ₹ 8,607ಕ್ಕೆ ತಲುಪಿದೆ.

ಟಾಟಾ ಮೋಟಾರ್ಸ್‌ ಶೇ 6.07 ರಷ್ಟು ಗರಿಷ್ಠ ನಷ್ಟ ಕಂಡಿದೆ. ಎಸ್‌ಬಿಐ (ಶೇ 5.93), ಇನ್ಫೊಸಿಸ್‌ (ಶೇ 5.09), ಅದಾನಿ ಪೋರ್ಟ್ಸ್ (ಶೇ 4.28) ಹೆಚ್ಚು ನಷ್ಟ ಕಂಡ ಕಂಪನಿಗಳಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.