ಕಾಲುಚೀಲ ದುರ್ನಾತ ಬಸ್‌ನಲ್ಲೊಂದು ಪ್ರಹಸನ

ನವದೆಹಲಿ: ಬಸ್‌ನ ಸಹ ಪ್ರಯಾಣಿಕರು ತರಕಾರು ತೆಗೆದ ಕಾರಣ ದುರ್ವಾಸನೆ ಬರುತ್ತಿದ್ದ ಕಾಲುಚೀಲ ಧರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಿಮಾಚಲ ಪ್ರದೇಶದಿಂದ ದೆಹಲಿಗೆ ತೆರಳುತ್ತಿದ್ದ ಬಸ್‌ನಲ್ಲಿ ಈ ಘಟನೆ ನಡೆದಿದೆ.
ಪ್ರಯಾಣಿಕನೊಬ್ಬ ತನ್ನ ಶೂ ಕಳಚಿಟ್ಟು, ಕಾಲುಚೀಲಗಳನ್ನು ಬಸ್‌ನಲ್ಲಿ ಒಣಗಿಹಾಕಿದ್ದ. ಈ ದುರ್ನಾತಕ್ಕೆ ಬೇಸತ್ತ ಬಸ್‌ನ ಸಹ ಪ್ರಯಾಣಿಕರು ಆತನೊಂದಿಗೆ ಜಗಳ ತೆಗೆದಿದ್ದಾರೆ. ಪ್ರಯಾಣಿಕರು ಎಷ್ಟೇ ಆಕ್ರೋಶ ವ್ಯಕ್ತಪಡಿಸಿದರೂ ಆತ ಒತ್ತಡಕ್ಕೆ ಮಣಿಯಲಿಲ್ಲ. ಹೀಗಾಗಿ ಚಾಲಕನು ಬಸ್ ಅನ್ನು ಉನಾ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾನೆ.
‘ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು’ ಎಂದು ಉನಾ ಪೊಲೀಸ್ ಮುಖ್ಯಸ್ಥ ಸಂಜೀವ್ ಗಾಂಧಿ ತಿಳಿಸಿದ್ದಾರೆ.
ತಾನು ಧರಿಸಿದ್ದ ಕಾಲುಚೀಲದಿಂದ ದುರ್ವಾಸನೆ ಬರುತ್ತಿರಲಿಲ್ಲ ಎಂದು ಪ್ರತಿ ದೂರು ನೀಡಿರುವ ಆ ಪ್ರಯಾಣಿಕ, ಸಹ ಪ್ರಯಾಣಿಕರ ತನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾನೆ. ದೂರು ನೀಡಿದ ಬಳಿಕ ಬೇರೊಂದು ಬಸ್‌ನಲ್ಲಿ ಆತ ಪ್ರಯಾಣ ಮುಂದುವರಿಸಿದ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.