ಶುಕ್ರವಾರ, ಮಾರ್ಚ್ 5, 2021
17 °C

ತುಳಸಿಗೇರಿಯ ಕಾರ್ತೀಕೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಳಸಿಗೇರಿಯ ಕಾರ್ತೀಕೋತ್ಸವ

ಕಲಾದಗಿ: ಸಮೀಪದ ಐತಿಹಾಸಿಕ ಧಾರ್ಮಿಕ ಕ್ಷೇತ್ರ ತುಳಸಿಗೇರಿಯ ಮಾರುತೇಶ್ವರ ದೇವಸ್ಥಾನದಲ್ಲಿ ಕಾರ್ತೀಕೋತ್ಸವದ ನಿಮಿತ್ತ ಪಂಚಾಮೃತ ಅಭಿಷೇಕ, ಅಲಂಕಾರ ವಿವಿಧ ಪೂಜಾ ವಿಧಾನಗಳು ಹಾಗೂ ಕಳಸಾ ರೋಹಣ ಕಾರ್ಯಕ್ರಮ ನಡೆಯಿತು.

ಆಂಜನೇಯನಿಗೆ ವಿಶೇಷ ನೈವೇದ್ಯ, ಬಾಣದ ಗಡಿಗೆ, ಸಜ್ಜಿ ರೊಟ್ಟಿ, ಚವಳಿ ಕಾಯಿ ಪಲ್ಲೆ, ಹುಗ್ಗಿಯನ್ನು ಹರಕೆ ಹೊತ್ತ ಭಕ್ತರು ಗೋಪಾಲು ತುಂಬಿಸಿ ನಂತರ ದೇವರ ದರ್ಶನವನ್ನು ಪಡೆದುಕೊಂಡರು.

ಜಿಲ್ಲಾಡಳಿತ ಭಕ್ತರಿಗೆ ಹಾಗೂ ಅಂಗಡಿಕಾರರಿಗೆ ಯಾವುದೇ ತೊಂದರೆಯಾಗದಂತೆ ವಿಶಾಲವಾದ ಸ್ಥಳಾವಕಾಶ ಒದಗಿಸಿತ್ತು. ಜಾತ್ರೆಗೆ ಬಂದ ಭಕ್ತರಿಗೆ ಉತ್ತಮ ನೀರಿನ ವ್ಯವಸ್ಥೆ, ದರ್ಶನ ಪಡೆಯಲು ಸರದಿಯಲ್ಲಿ ನಿಲ್ಲಲು ಬ್ಯಾರಿಕೇಡ್ ನಿರ್ಮಾಣ, ವಾಹನ ಸವಾರರಿಗೆ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಶನಿವಾರ ಸಂಜೆ ಚಕ್ಕಡಿಗಳು, ಟಂಟಂ ಹಾಗೂ ಟ್ಯಾಕ್ಟರ್‌ಗಳಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುವುದು ಕಂಡುಬಂದಿತು. ಭಾನುವಾರ ಜಾತ್ರೆಯ ಸಂಭ್ರಮ ಹೆಚ್ಚಳವಾಗಲಿದೆ.

ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಬಂದೂಬಸ್ತ್ ಒದಗಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.