6

ಕುಬ್ಜಗಿಡಗಳ ಕನಸುಹೊತ್ತ ಸಸ್ಯಾಭಿಮಾನಿ

Published:
Updated:

ಮೂಡುಬಿದಿರೆ: ಎಲ್ಲೆಲ್ಲೂ ಸುಂದರ ಗಿಡಗಳ ಹುಡುಕಿ, ಅವುಗಳನ್ನು ಪೋಷಿಸಿ ತಮ್ಮ ಬದುಕಿನಲ್ಲಿ ಕಲೆಯ ಆಗರವನ್ನು ಮೈಗೂಡಿಸಿಕೊಂಡವರು ಹೈದರಾಬಾದಿನ ಗೊವಿಂದರಾಜ್, ಕುಬ್ಜ ಗಿಡಗಳ ಸಂಗ್ರಹಗಾರ. 30 ವರ್ಷಗಳಿಂದ ಬೋನ್ಸಾಯ್ ಮರಗಳನ್ನು ಪೋಷಿಸಿ ಬೆಳೆಸುತ್ತಿರುವ ಇವರು ಪ್ರತಿಯೊಂದು ಗಿಡಗಳಲ್ಲಿ ಕಲೆಯನ್ನು ಹುಡುಕುತ್ತಾರೆ.

ಭಾರತದ ಹಿರಿಯ ಬೋನ್ಸಾಯ್ ಸಂಗ್ರಹಕಾರ ಗೋವಿಂದರಾಜ್ ತಮ್ಮ ಕಲಿಕೆ ಹಾಗೂ ಜ್ಞಾನವನ್ನು ಆಳ್ವಾಸ್‌ ನುಡಿಸಿರಿಯಲ್ಲಿ ಆಸಕ್ತರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಬೋನ್ಸಾಯ್ ಮರಗಳ ಪೋಷಣೆಯೂ ಕೃಷಿಯಾಗಿದೆ. ಈ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವವರಿಗೆ ತರಬೇತಿಯನ್ನೂ ನೀಡುತ್ತಾರೆ.

ಬೋನ್ಸಾಯ್ ಗಿಡಗಳ ಆರೈಕೆ ಮತ್ತು ಪೋಷಣೆಗೆಂದು ತಮ್ಮ ಇಡೀ ದಿನವನ್ನು ಮೀಸಲಿಡುವ ಇವರು ದಿನವೊಂದಕ್ಕೆ 8ರಿಂದ 10 ಗಂಟೆಗಳನ್ನು ಗಿಡಗಳೊಂದಿಗೆ ಕಾಲ ಕಳೆಯುತ್ತಾರೆ. ಪ್ರಯಾಣದ ಸಂದರ್ಭದಲ್ಲಿ ಕಾಣುವ ಅಥವಾ ದೊರಕುವ ವಯಸ್ಸಾದ ಬೋನ್ಸಾಯ್ ಗಿಡಗಳನ್ನು ಖರೀದಿಸಿ ಸಾಕುವ ವಿಶಾಲ ಮನಸ್ಸು ಗೋವಿಂದರಾಜ್‍ ಅವರದ್ದು. ಈ ಮರಗಳಿಗೆ ಎಳೆಯ ಗಿಡಗಳಿಗಿಂತಾ ಹೆಚ್ಚಿನ ಕಾಳಜಿ ಮತ್ತು ಪೋಷಣೆ ಬೇಕಾಗುತ್ತದೆ ಎಂದು ಹೇಳುತ್ತಾರೆ.

ತಮ್ಮ ಕೆಲಸಕ್ಕೆ ಮಡದಿಯ ಬೆಂಬಲ ಉತ್ತಮವಾಗಿದ್ದು, ಅವರಿಂದಲೇ ಈ ಮಟ್ಟಕ್ಕೇರಲು ಸಾಧ್ಯವಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ‘ನಾನು ದೇಶದಾದ್ಯಂತ ಸುತ್ತಾಡುತ್ತೇನೆ. ಈ ಸಂದರ್ಭದಲ್ಲಿ ನನ್ನ ಮಕ್ಕಳನ್ನು ಪ್ರೀತಿಯಿಂದ ಬೆಳೆಸಿದವಳು ಜೊತೆಗೆ ಮಕ್ಕಳಂತೆ ಗಿಡಗಳನ್ನು ಪೋಷಿಸಿದವಳು’ ಎಂದು ಸಂತಸದಿಂದ ಹೇಳಿಕೊಂಡರು.

ಪ್ರತಿಯೊಬ್ಬ ವ್ಯಕ್ತಿಯ ಚಿಂತನಾ ಸಾಮರ್ಥ್ಯಬೇರೆ ಬೇರೆ. ಒಬ್ಬೊಬ್ಬರು ಒಂದೊಂದು ಕ್ಷೇತ್ರದಲ್ಲಿ ಖುಷಿ ಅನುಭವಿಸುತ್ತಾರೆ. ಬೋನ್ಸಾಯ್ ಗಿಡಗಳಲ್ಲಿ ಕಲೆಯೊಂದಿಗೆ ಖುಷಿ ಕಾಣುವ ಗೋವಿಂದ ರಾಜ್, ಪ್ರತಿದಿನದ ನೆಮ್ಮದಿಗೆ ಇದನ್ನೇ ಮೆಚ್ಚಿಕೊಂಡಿದ್ದಾರೆ. ಮಾತಿನಂತೆ ಗಿಡಗಳು ಕುಬ್ಜವಾದರೂ ಇವುಗಳ ಖ್ಯಾತಿ ವಿಶ್ವಾದ್ಯಂತ ಪಸರಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry