7

ಬೆಲೆ ಕುಸಿದರೂ ಮೊಟ್ಟೆ ತುಟ್ಟಿ

Published:
Updated:

ಮೈಸೂರು: ಮೊಟ್ಟೆಯ ಬೆಲೆ ಕುಸಿದಿದ್ದರೂ ಗ್ರಾಹಕರ ಪಾಲಿಗೆ ದುಬಾರಿಯೇ ಆಗಿದೆ. ಮೊಟ್ಟೆಯೊಂದರ ಬೆಲೆ ಈಗ ₹ 6 ಇದೆ. ಮಳೆಯ ಕೊರತೆಯಿಂದಾಗಿ ಕೋಳಿಗೆ ನೀಡುವ ಆಹಾರ ದುಬಾರಿಯಾಗಿದ್ದ ಕಾರಣ ಮೊಟ್ಟೆ ಬೆಲೆಯೂ ಹೆಚ್ಚಿತ್ತು. ನವೆಂಬರ್‌ನಲ್ಲಿ ಸಗಟು ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ 100ಕ್ಕೆ ₹ 496 ಆಗಿತ್ತು. ಹೀಗಾಗಿ, ಮೊಟ್ಟೆಯು ಗ್ರಾಹಕರ ಕೈ ಸೇರುವಾಗ ಒಂದಕ್ಕೆ ₹ 6ರಿಂದ ₹ 7ಕ್ಕೆ ಏರಿತ್ತು.

ಈಗ ಬೆಲೆ ಶೇ 25ರಷ್ಟು ಕಡಿಮೆಯಾಗಿದ್ದರೂ, ಮಾರುಕಟ್ಟೆಯಲ್ಲಿ ಒಂದಕ್ಕೆ ₹ 6 ಇದೆ. ರೈತರು ಹಾಗೂ ಗ್ರಾಹಕರ ನಡುವಿನ ದಲ್ಲಾಳಿಗಳಿಂದಾಗಿ ಮೊಟ್ಟೆ ಬೆಲೆಯು ಕಡಿಮೆಯಾಗಿಲ್ಲ ಎಂದು ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿಯ ಮಾರುಕಟ್ಟೆ ಅಧಿಕಾರಿ ಶೇಷನಾರಾಯಣ ತಿಳಿಸಿದ್ದಾರೆ.

‘ಗ್ರಾಹಕರು ಹೆಚ್ಚಿನ ಬೆಲೆ ತೆತ್ತು ಮೊಟ್ಟೆ ಖರೀದಿಸಬಾರದು. ಸಮಿತಿ ಅಧೀನದ ದೇವರಾಜ ಮಾರುಕಟ್ಟೆ ಬಳಿಯ ಆನೆ ಸಾರೋಟು ಬೀದಿ ಹಾಗೂ ಮಂಡಿ ಮೊಹಲ್ಲಾದ ಅಕ್ಬರ್‌ ರಸ್ತೆಯಲ್ಲಿರುವ ಮಳಿಗೆಯಲ್ಲಿ ಮೊಟ್ಟೆಯೊಂದಕ್ಕೆ ₹ 4.35ರಂತೆಯೇ ಸಿಗುತ್ತದೆ. ಇದೇ ಬೆಲೆಗೆ ಬೇರೆಡೆಯೂ ಮೊಟ್ಟೆ ಮಾರಾಟವಾಗಬೇಕು. ಈ ಜಾಗೃತಿ ಗ್ರಾಹಕರಲ್ಲಿ ಬರಬೇಕು’ ಎಂದು ಹೇಳಿದ್ದಾರೆ. ಮಾಹಿತಿಗೆ ಮೊ: 9449824280 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry