ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಿ ದೇವಿ ಜಾತ್ರೆ: ಅಗ್ನಿಕುಂಡ ಹಾಯ್ದ ಅರ್ಚಕಿ

Last Updated 3 ಡಿಸೆಂಬರ್ 2017, 5:16 IST
ಅಕ್ಷರ ಗಾತ್ರ

ಮಹಾಲಿಂಗಪುರ: ಸ್ಥಳೀಯ ಶಾಂತಿನಿಕೇತನ ಬಡಾವಣೆಯ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವ ಶುಕ್ರವಾರ ಜರುಗಿತು. ಜಾತ್ರೆಯ ನಿಮಿತ್ತ ಬೆಳಿಗ್ಗೆ 6 ಘಂಟೆಗೆ ಅಯ್ಯಪ್ಪ ಮಾಲಾಧಾರಿಗಳಿಂದ ರುದ್ರಾಭಿಷೇಕ, 10 ಗಂಟೆಗೆ ಮಹಾಪೂಜೆ, 11 ಗಂಟೆಗೆ 501 ಜನ ಮುತ್ತೈದೆಯರ ಉಡಿತುಂಬವ ಕಾರ್ಯಕ್ರಮಗಳು ಜರುಗಿದವು.

ಮಧ್ಯಾಹ್ನ 12 ಘಂಟೆಗೆ ಲಕ್ಷ್ಮಿ ದೇವಿಯ ಅರ್ಚಕಿ ಶಾಂತವ್ವ ನಂದಿ ಅಗ್ನಿಕುಂಡ ಹಾಯ್ದು ಭಕ್ತಿಯ ಪರಾಕಾಷ್ಠೆ ಮೆರೆದರು. ನಂತರ ಮಹಾ ಮಂಗಳಾರತಿ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು. ಭಕ್ತರ ಭಾಗ್ಯದಾತೆ, ಮಹಿಮಾಶಾಲಿ ಲಕ್ಷ್ಮಿ ಜಾತ್ರೆಗೆ ಮಹಾಲಿಂಗಪುರ ಹಾಗೂ ಸುತ್ತ-ಮುತ್ತಲಿನ ಊರುಗಳ ನೂರಾರು ಭಕ್ತರು ಆಗಮಿಸಿ ಪೂಜೆಸಲ್ಲಿಸಿದರು.

ಸುರೇಶ ನಂದಿ, ರವಿ ಸುಂಬಾಳೆ, ರಮೇಶ ಮಡಿವಾಳರ, ವಿನೋದ ಕಡಪಟ್ಟಿ, ಜಟೆಪ್ಪ ವಾಲಿಕಾರ, ಮುಕುಂದ ಬಡಿಗೇರ, ಗುರುರಾಜ ಅಂಬಿ, ರಾಯಪ್ಪ ನಾಯ್ಕರ್, ಸರೋಜನಿ ಬಡೀಗೇರ, ಗೀತಾ ಅಂಬಿ, ಶೀತಲ್ ನಾಶಿ, ಸುಶೀಲಾ ಘಟ್ನಟ್ಟಿ, ದಾನಮ್ಮ ಬಂಡಿ, ಮಹಾದೇವಿ ರಾಚನ್ನವರ, ಸಂಗೀತಾ ವಿಜಾಪೂರ, ಸೋನಾಲಿ ಸಾಲಾಪೂರ, ಮಂಜುಳಾ ಹಿಡಕಲ್ ಜಾತ್ರಾ ಮಹೋತ್ಸವದ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT