5
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

‘ಸುಸಂಸ್ಕೃತರಾಗದ ಜಾನಪದ ಕಲಾವಿದರು’

Published:
Updated:

ಯಾದಗಿರಿ: ‘ಕಲೆಗಳು ಬುಡಕಟ್ಟು, ಪರಂಪರೆ, ಆಚರಣೆಗಳ ಪ್ರತೀಕವಾಗಿರುತ್ತವೆ. ಕಲೆಗಳಿಗೆ ನೆಲೆಯೊದಗಿಸಿದ ಮೂಲ ಸಂಸ್ಕೃತಿಯನ್ನೂ ಕಾಪಾಡುವ ಹೊಣೆ ಕಲಾವಿದರ ಮೇಲಿದೆ’ ಎಂದು ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರ ಅಭಿಪ್ರಾಯಪಟ್ಟರು.

ನಗರದ ವಿದ್ಯಾಮಂಗಲ ಸಭಾಂಗಣದಲ್ಲಿ ಶನಿವಾರ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜ್ಯ ಜಾನಪದ ಅಕಾಡೆಮಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಚರ್ಮವಾದ್ಯಗಳ ಕಲಾವಿದರ ಸಮಾವೇಶ ಹಾಗೂ ಜಾನಪದ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕಲಾವಿದರು ಸುಸಂಸ್ಕೃತರಾಗುತ್ತಿಲ್ಲ. ಕಲೆಯ ಆರಾಧಕರೆನಿಸಿರುವ ಕಲಾವಿದರು ಕಲಾ ಸಂಸ್ಕೃತಿಗೆ ಬದ್ಧತೆ ಪ್ರದರ್ಶಿಸುತ್ತಿಲ್ಲ. ಹಿಂದೆ ಕಲೆಯನ್ನು ದೈವಿಸ್ವರೂಪವಾಗಿ ಕಾಣಲಾಗುತ್ತಿತ್ತು. ಅದರಂತೆ ಸಮಾಜ ಕಲಾವಿದರನ್ನು ಗೌರವಿಸುತ್ತಿತ್ತು. ಗೌರವಕ್ಕೆ ಪಾತ್ರರಾಗುವ ಕಲಾವಿದರು ಸುಸಂಸ್ಕೃತರಾಗಿರುತ್ತಿದ್ದರು.

ಆದರೆ, ಇಂದು ಕಲಾವಿದರು ಹಲವು ದುಶ್ಚಟಗಳ ದಾಸರಾಗುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಕಲಾವಿದರನ್ನು ಸಮಾಜದಲ್ಲಿ ಕಡೆಗಣಿಸಲಾಗುತ್ತಿದೆ’ ಎಂದು ವಿಷಾದಿಸಿದರು. ಜಾನಪದ ಅಕಾಡೆಮಿ ಸದಸ್ಯ ಪ್ರಕಾಶ್ ಅಂಗಡಿ ಮಾತನಾಡಿ, ‘ಫೆಬ್ರುವರಿಯೊಳಗಾಗಿ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry