ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಈದ್‌ ಮಿಲಾದ್ ಮೆರವಣಿಗೆ

Last Updated 3 ಡಿಸೆಂಬರ್ 2017, 6:42 IST
ಅಕ್ಷರ ಗಾತ್ರ

ಕಾರವಾರ: ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನಾಚರಣೆ ಅಂಗವಾಗಿ ನಗರದಲ್ಲಿ ಶನಿವಾರ ಭವ್ಯ ಮೆರವಣಿಗೆ ನಡೆಯಿತು. ಭಕ್ತಿ ಭಾವದಿಂದ ಹೆಜ್ಜೆ ಹಾಕಿದ ಮುಸ್ಲಿಮರು ಈದ್ ಮಿಲಾದ್ ಅನ್ನು ಸಂಭ್ರಮದಿಂದ ಆಚರಿಸಿದರು.

ನಗರದ ಜಾಮಿಯಾ ಮಸೀದಿ ಆರಂಭಗೊಂಡ ಮೆರವಣಿಗೆಯಲ್ಲಿ ಮುಸ್ಲಿಂ ಮುಖಂಡರು, ಚಿಕ್ಕ ಮಕ್ಕಳು ಸೇರಿದಂತೆ 500ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಕೆಲವರು ದ್ವಿಚಕ್ರ ವಾಹನದಲ್ಲಿ ಸಂಚರಿಸಿದರು. ಧಾರ್ಮಿಕ ಮುಖಂಡರು ಮೊಹಮ್ಮದ್‌ ಪೈಗಂಬರರನ್ನು ಸ್ಮರಿಸಿದರು. ಅಲ್ಲಲ್ಲಿ ತಂಪು ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಈ ಮೆರವಣಿಗೆಯು ಕಾಜುಬಾಗದ ಮಹಾಸತಿ ಸಭಾಂಗಣದ ಬಳಿ ಸಮಾಪನೆಗೊಂಡಿತು.

ಶುಭಾಶಯ ಕೋರಿದ ಸೈಲ್‌: ಕಾಜುಬಾಗದ ಕಡೆಗೆ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದ ಶಾಸಕ ಸತೀಶ್‌ ಸೈಲ್‌ ಮುಸ್ಲಿಮರಿಗೆ ಶುಭಾಶಯ ಕೋರಿದರು. ಮುಖಂಡ ಶಂಭು ಶೆಟ್ಟಿ ಇದ್ದರು.

ಮುಂಡಗೋಡ ವರದಿ
ಮುಂಡಗೋಡ: ಪ್ರವಾದಿ ಮಹಮ್ಮದ್ ಪೈಗಂಬರ್‌ ಅವರ ಜಯಂತಿ ಅಂಗವಾಗಿ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಮರು ಶನಿವಾರ ಇಲ್ಲಿ ಆಚರಿಸಿದರು. ಪಟ್ಟಣದ ಬನ್ನಿಕಟ್ಟೆಯ ನೂರಾನಿ ಮಸೀದಿ ಹತ್ತಿರ ಜಮಾವಣೆಗೊಂಡು ದೇವರ ನಾಮಸ್ಮರಣೆಯೊಂದಿಗೆ ಮೆರವಣಿಗೆಯಲ್ಲಿ ತೆರಳಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಮಕ್ಕಳು, ಯುವಕರು ಸೇರಿದಂತೆ ಸಹಸ್ರಾರು ಜನರು ಪಾಲ್ಗೊಂಡಿದ್ದರು. ಅಲಂಕೃತಗೊಂಡ ವಾಹನಗಳು ಮೆರವಣಿಗೆಯಲ್ಲಿ ಸಾಗಿದವು. ಸಿಹಿ ವಿತರಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಗ್ರಾಮೀಣ ಭಾಗದಲ್ಲಿಯೂ ಶ್ರದ್ಧಾ ಭಕ್ತಿಯಿಂದ ಹಬ್ಬವನ್ನು ಆಚರಿಸಿದರು. ಮುಖಂಡರಾದ ಬಿ.ಎಫ್‌.ಬೆಂಡಿಗೇರಿ, ನಾಜೀಮಆಲಾ ಮೋದಿನಖಾನ್ ಪಠಾಣ, ಸಲೀಂ ನಂದಿಗಟ್ಟಿ, ನೂರ ಅಹ್ಮದ್ ಗಡವಾಲೆ, ಮೆಹಬೂಬಸಾಬ್‌ ಮಲಬಾರಿ, ಅನ್ವರಖಾನ್‌ ಪಠಾಣ, ಮಹ್ಮದ್ ಜಾಫರ್‌ ಹಂಡಿ, ಬಾಬುಸಾಬ್ ಶೇಖ್, ಮುಷ್ತಾಕ್ ನೇತ್ರಿ, ಮಹ್ಮದ್‌ ರಫೀಕ್ ಇನಾಂದಾರ, ಅಹ್ಮದ್‌ ರಜಾಖಾನ್‌ ಪಠಾಣ ಹಾಜರಿದ್ದರು. ಸಿಪಿಐ ಕಿರಣಕುಮಾರ ನಾಯಕ ನೇತೃತ್ವದಲ್ಲಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT