ಕುಮಟಾಕ್ಕೆ ಮುಖ್ಯಮಂತ್ರಿ: ಸಿಂಗಾರಗೊಂಡ ರಸ್ತೆ

7

ಕುಮಟಾಕ್ಕೆ ಮುಖ್ಯಮಂತ್ರಿ: ಸಿಂಗಾರಗೊಂಡ ರಸ್ತೆ

Published:
Updated:
ಕುಮಟಾಕ್ಕೆ ಮುಖ್ಯಮಂತ್ರಿ: ಸಿಂಗಾರಗೊಂಡ ರಸ್ತೆ

ಕುಮಟಾ: ಬರುವ ಬುಧವಾರ ಕುಮಟಾಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಲಿರುವುದರಿಂದ ಮುಖ್ಯಮಂತ್ರಿಗಳ ವಾಹನ ಸಾಗುವ ಪಟ್ಟಣದ ಕೆಲ ಪ್ರಮುಖ ರಸ್ತೆಗಳ ದುರಸ್ತಿ ಕಾರ್ಯ ಶನಿವಾರ ಆರಂಭಗೊಂಡಿದೆ.

ಕುಮಟಾ ಪಟ್ಟಣಕ್ಕೆ ಒಳಚರಂಡಿ ಯೋಜನೆಗಾಗಿ ಸರಿಯಾಗಿದ್ದ ರಸ್ತೆಯನ್ನು ಅಗೆದು ಹಾಕಿ ಕಾಮಗಾರಿ ನಡೆಸಲಾಗಿತ್ತು. ಪ್ರವಾಸಿ ಮಂದಿರ ರಸ್ತೆಯ ಮಧ್ಯೆ ಅಲ್ಲಲ್ಲಿ ಒಳ ಚರಂಡಿ ಚೇಂಬರ್ ನಿರ್ಮಾಣಕ್ಕಾಗಿ ಗುಂಡಿ ತೋಡಿ ನಂತರ ಸರಿ ಮಾಡಿದ್ದರೂ ರಸ್ತೆಯ ಉಬ್ಬು–ತಗ್ಗುಗಳು ಹಾಗೇ ಇದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸಿ ಮಂದಿರಕ್ಕೆ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ರಾಷ್ಟ್ರೀಯ ಹೆದ್ದಾರಿಯಿಂದ ಸಾಗುವ ಪ್ರವಾಸಿ ಮಂದಿರ ರಸ್ತೆಯನ್ನು ದುರಸ್ತಿಗೊಳಿಸಲಾಗಿದೆ.

ಭಟ್ಕಳ ಕಾರ್ಯಕ್ರಮ ಮುಗಿಸಿ ಮುಖ್ಯಮಂತ್ರಿ ಅವರು ಹೆಲಿಕ್ಯಾಪ್ಟರ್ ಮೂಲಕ ಕುಮಟಾಕ್ಕೆ ಬರಲಿದ್ದಾರೆ. ಡಾ. ಎ.ವಿ. ಬಾಳಿಗಾ ಮಹಾವಿದ್ಯಾಲಯ ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್ ಇರುವುದಿಂದ ಅಲ್ಲಿಂದ ಕಾರ್ಯಕ್ರಮ ನಡೆಯುವ ಮಹಾತ್ಮಾಗಾಂಧಿ ಕ್ರೀಡಾಂಗಣವರೆಗಿನ ಕಾಲೇಜು ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯನ್ನು ಅಲ್ಲಲ್ಲಿ ದುರಸ್ತಿ ಮಾಡಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry