ಭಾನುವಾರ, ಮಾರ್ಚ್ 7, 2021
31 °C

ಕಾಂಗ್ರೆಸ್‌ ಸಮಾಜವನ್ನು ವಿಭಜಿಸುತ್ತಿದೆ: ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಸಮಾಜವನ್ನು ವಿಭಜಿಸುತ್ತಿದೆ: ಮೋದಿ

ಭರೂಚ್‌: ‘ಜಾತಿ ಮತ್ತು ಧರ್ಮದ ಆಧಾರದಲ್ಲಿ ಕಾಂಗ್ರೆಸ್‌ ಸಮಾಜವನ್ನು ವಿಭಜಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಗುಜರಾತ್‌ನ ಭರೂಚ್‌ ಜಿಲ್ಲೆಯಲ್ಲಿ ಭಾನುವಾರ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಏನೆಂಬುದು ಗುಜರಾತ್‌ನ ಜನರಿಗೆ ಗೊತ್ತು. ಅದು ಕಾಲಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ, ಸಹೋದರರ ನಡುವೆ ಗೋಡೆಗಳನ್ನು ನಿರ್ಮಿಸುವ, ಜಾತಿಗಳು ಮತ್ತು ಧರ್ಮಗಳ ನಡುವೆ ಜಗಳಗಳನ್ನು ಹಚ್ಚುವ ಪಕ್ಷ’ ಎಂದು ಹರಿಹಾಯ್ದರು.

‘ಕಾಂಗ್ರೆಸ್‌ನವರು ನಿಮ್ಮನ್ನು ಪರಸ್ಪರ ಕಾದಾಡುವಂತೆ ಮಾಡುತ್ತಾರೆ. ಅದರಿಂದ ನೀವು ಸಾಯಲೂಬಹುದು. ಆದರೆ, ಅದರ ಲಾಭವನ್ನು ಅವರು ಪಡೆಯುತ್ತಾರೆ’ ಎಂದು ಹೇಳಿದರು.

ಗುಜರಾತ್‌ನ 182 ವಿಧಾನಸಭಾ ಕ್ಷೇತ್ರಗಳಿಗೆ ಡಿ.9 ಮತ್ತು 14 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಭರೂಚ್‌ನಲ್ಲಿ 9ರಂದು(ಶನಿವಾರ) ಮತ ಚಲಾವಣೆ ನಡೆಯಲಿದೆ. ಡಿ.18ರಂದು ಮತಗಳ ಎಣಿಕೆ ನಡೆಯಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.