ಮಂಗಳವಾರ, ಮಾರ್ಚ್ 2, 2021
24 °C

2018ರ ಎಪ್ರಿಲ್‌ನಲ್ಲಿ ತೆರೆಗೆ ಬರಲಿದೆ 2.0

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

2018ರ ಎಪ್ರಿಲ್‌ನಲ್ಲಿ ತೆರೆಗೆ ಬರಲಿದೆ 2.0

ಮುಂಬೈ: ತಮಿಳು ನಟ ರಜನಿಕಾಂತ್‌ ಹಾಗೂ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅಭಿನಯದ 2.0 ಚಿತ್ರದ ಬಿಡುಗಡೆಗೆ ಸಿದ್ಧವಾಗಿದೆ.

ನಿರ್ದೇಶಕ ಶಂಕರ್‌ ನೇತೃತ್ವದಲ್ಲಿ ತಯಾರಾಗಿರುವ 2.0 ಚಿತ್ರ 2018ರ ಎಪ್ರಿಲ್‌ನಲ್ಲಿ ವಿಶ್ವದದ್ಯಾಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಮೊದಲು ಜ. 26ರಂದು ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಆದರೆ 3ಡಿ ಗ್ರಾಫಿಕ್ಸ್‌ ಕೆಲಸಗಳು ಬಾಕಿ ಇದ್ದ ಕಾರಣಕ್ಕೆ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿತ್ತು. ಆದರೆ, ಜ. 26ರಂದು ಅಕ್ಷಯ್‌ ಕುಮಾರ್‌ ಅಭಿನಯದ ‘ಪದ್ಮಾನ್‌’ ಚಿತ್ರ ಬಿಡುಗಡೆಯಾಗಲಿದೆ. 

ಈ ಚಿತ್ರ 3ಡಿ ತಂತ್ರಜ್ಞಾನವನ್ನು ಒಳಗೊಂಡಂತೆ 450 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದು, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಮೂಡಿಬರಲಿದೆ.

ಚಿತ್ರದಲ್ಲಿ ರಜನಿಕಾಂತ್‌, ಅಕ್ಷಯ್‌ ಕುಮಾರ್‌, ನಟಿ ಆ್ಯಮಿ ಜಾಕ್ಸನ್‌ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.