ಶುಕ್ರವಾರ, ಫೆಬ್ರವರಿ 26, 2021
20 °C

ಒತ್ತಡ ತಿಳಿಯುವುದು ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒತ್ತಡ ತಿಳಿಯುವುದು ಹೇಗೆ?

ಈಗಂತೂ ಎಲ್ಲರೂ ಒತ್ತಡದಲ್ಲಿಯೇ ಬದುಕುತ್ತಿದ್ದಾರೆ. ನಮಗೇ ತಿಳಿಯದಂತೆ ಒತ್ತಡ ನಮ್ಮನ್ನು ಆಳುತ್ತಿರುತ್ತದೆ. ನಾವು ಒತ್ತಡದಲ್ಲಿದ್ದೇವೆ ಎಂಬುದನ್ನು ತಿಳಿಯುವುದಾದರೂ ಹೇಗೆ? ನಮ್ಮ ದೇಹಭಾಷೆಯೇ ಅದನ್ನು ತಿಳಿಸುತ್ತದೆ. ಹೇಗೆ ಅಂತಿರಾ? ಇದನ್ನೊಮ್ಮೆ ಓದಿ...

ಚರ್ಮದ ಹಾನಿ: ಒತ್ತಡದಿಂದ ಹಲವು ಬಗೆಯ ಚರ್ಮದ ಕಾಯಿಲೆ ಉಂಟಾಗುತ್ತದೆ. ಉರಿಯೂತ, ಸೋರಿಯಾಸಿಸ್‌, ಅಟೊಪಿಕ್ ಎಸ್ಜಿಮಾ ರೋಸೇಸಿಯಾ ಮತ್ತು ಮೊಡವೆಗಳ ಸಮಸ್ಯೆ ಶುರುವಾಗುತ್ತದೆ. ಚರ್ಮದಹಾನಿ ಆತ್ಮವಿಶ್ವಾಸದ ಮೇಲೆಯೂ ಪರಿಣಾಮ ಬೀರುವುದರಿಂದ ಈ ಸಮಸ್ಯೆ ಉಲ್ಬಣವಾಗುತ್ತದೆ

ಪರಿಹಾರ: ರಾತ್ರಿ ಚೆನ್ನಾಗಿ ನಿದ್ದೆ ಮಾಡುವುದರಿಂದ ಸಮಸ್ಯೆಯ ನಿಯಂತ್ರಣ ಸಾಧ್ಯ. ಸಕ್ಕರೆ ಕಡಿಮೆ ಸೇವನೆಯಿಂದ ಉರಿಯೂತ ನಿಯಂತ್ರಿಸಬಹುದು. ಮೊಡವೆ ಮೂಡಿದ್ದರೆ ವೈದ್ಯರ ಬಳಿ ಹೋಗಿ, ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್‌ ಬಳಸಿ

ಕುಂದುವ ರೋಗನಿರೋಧಕ ಶಕ್ತಿ: ಒತ್ತಡ ಹೆಚ್ಚಾದಂತೆ ರೋಗ ನಿರೋಧಕ ಶಕ್ತಿ ಕುಂದುತ್ತದೆ. ದೇಹದಲ್ಲಿ ಪ್ರತಿರೋಧಕ ಶಕ್ತಿ ಕಡಿಮೆಯಾದಂತೆ ಹಲವು ಕಾಯಿಲೆಗಳು ಬರುತ್ತವೆ

ಪರಿಹಾರ: ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ. ಧೂಮಪಾನ ಮಾಡಬೇಡಿ. ಹಣ್ಣು, ತರಕಾರಿ, ಕಾಳುಗಳನ್ನು ಹೆಚ್ಚು ಸೇವಿಸಿ.

ಅಜೀರ್ಣ: ಸ್ವಲ್ಪ ತಿಂದರೂ ಕೆಲಮೊಮ್ಮೆ ಹೊಟ್ಟೆಉಬ್ಬರಿಸಿದಂತೆ ಆಗುತ್ತದೆ. ಒತ್ತಡವೂ ಇದಕ್ಕೆ ಕಾರಣವಾಗಿರುತ್ತದೆ. ಸೂಕ್ತಕಾಲದಲ್ಲಿ ಗಮನಿಸಿಕೊಳ್ಳದಿದ್ದರೆ ಇದು ಕರುಳನ್ನೂ ಬಾಧಿಸುತ್ತದೆ

ಪರಿಹಾರ: ಕೆಲಸದ ಒತ್ತಡದಲ್ಲಿ ಆಹಾರ ಸೇವನೆಯ ಸಮಯಪಾಲನೆ ಮರೆಯದಿರಿ. ವೈದ್ಯರ ಸಲಹೆಯಿಲ್ಲದೆ ಯಾವುದೇ ಮಾತ್ರೆ, ಔಷಧ ಸೇವಿಸಬೇಡಿ. ನಾರಿನ ಅಂಶವಿರುವ ಪದಾರ್ಥಗಳ ಸೇವನೆಗೆ ಆದ್ಯತೆ ಕೊಡಿ. ದಿನವೂ 3ರಿಂದ 4 ಲೀಟರ್‌ ನೀರು ಕುಡಿಯಿರಿ

ಆತಂಕ, ಖಿನ್ನತೆ: ಒತ್ತಡ ಹೆಚ್ಚಾದ್ದಂತೆ ಮನಸ್ಸು ಆತಂಕದ ಗೂಡಾಗುತ್ತದೆ. ನೆನಪಿನ ಶಕ್ತಿ, ಏಕಾಗ್ರತೆ ಕಡಿಮೆಯಾಗುತ್ತದೆ. ಸುಖಾಸುಮ್ಮನೆ ಭಯವೂ ಆಗುತ್ತಿರುತ್ತದೆ

ಪರಿಹಾರ: ವ್ಯಾಯಾಮವೇ ಒತ್ತಡಕ್ಕೆ ಉತ್ತಮ ಮದ್ದು. ಯೋಗ ಮಾಡುವುದೂ ಒಳ್ಳೆಯದು. ದೀರ್ಘವಾಗಿ ಉಸಿರು ತೆಗೆದುಕೊಳ್ಳುವುದರಿಂದ ಮನಸ್ಸು ಹಗುರಾಗುತ್ತದೆ

ನಿದ್ರಾಹೀನತೆ: ದಿನವಿಡೀ ದುಡಿದುದಣಿದಿದ್ದರೂ ವಿಪರೀತ ಮಾನಸಿಕ ಒತ್ತಡ ಅನುಭವಿಸಿದ್ದರೆ ರಾತ್ರಿ ಮಲಗಿದ ತಕ್ಷಣ ನಿದ್ದೆ

ಬರುವುದಿಲ್ಲ. ಇದರಿಂದ ಮಾನಸಿಕ ಒತ್ತಡ ಮತ್ತಷ್ಟು ಹೆಚ್ಚಲು ಮುಖ್ಯಕಾರಣ

ಪರಿಹಾರ: ಪ್ರತಿದಿನ ಸರಿಯಾದ ಸಮಯಕ್ಕೆ ನಿದ್ದೆ ಮಾಡಿ. ಮಲಗುವ ಮೊದಲು ಸ್ನಾನ ಮಾಡುವುದರಿಂದ ದೇಹದ ದಣಿವು ಕಡಿಮೆಯಾಗುತ್ತದೆ. ಮಲಗುವಾಗ ಮನೆಯ ವಾತಾವರಣ ಪ್ರಶಾಂತವಾಗಿರಲಿ. ಮಲಗುವ ಮೊದಲು ಕೆಫಿನ್ ಅಂಶವಿರುವ ಪಾನೀಯ ಸೇವನೆ ಬೇಡ

ಆಹಾರದ ಅಲರ್ಜಿ: ಇದು ಕರುಳಿನ ಸೋರುವಿಕೆಗೆ ಕಾರಣವಾಗುತ್ತದೆ. ಕೆಲವು ಆಹಾರಗಳನ್ನು ತಿನ್ನುವುದೇ ಬೇಡ ಎನಿಸುತ್ತದೆ. ತಿಂದರೂ, ದೇಹ ಅದನ್ನು ಸಹಿಸಿಕೊಳ್ಳುವುದಿಲ್ಲ.

ಪರಿಹಾರ: ನಿದ್ರೆ, ವ್ಯಾಯಾಮ ಇದಕ್ಕೆ ಮದ್ದು.

ಮಾಹಿತಿ: www.mirror.co.uk

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.