ಗುರುವಾರ , ಮಾರ್ಚ್ 4, 2021
26 °C

ಸೂಪರ್‌ಸ್ಟಾರ್‌ ಅಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂಪರ್‌ಸ್ಟಾರ್‌ ಅಲ್ಲ

‘ಪಾಣಿ ದಾ’ ಹಾಡನ್ನು ಬರೆದು, ಸಂಗೀತ ಸಂಯೋಜನೆ ಮಾಡಿ, ಹಾಡನ್ನೂ ಹೇಳಿ ಸಿನಿಮಂದಿಯ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿದವರು ಆಯುಷ್ಮಾನ್‌ ಖುರಾನಾ. ಸದಾ ಹೊಸತನ್ನು ಕೊಡುವವ, ಕಠಿಣ ಪರಿಶ್ರಮಿ, ವಿಭಿನ್ನ ನಟ... ಹೀಗೆ ಸಿನಿಲೋಕದಲ್ಲಿ ಆಯುಷ್ಮಾನ್‌ ಅವರಿಗೆ ವಿಶೇಷ ಇಮೇಜ್‌ ಇದೆ. ಆದರೆ ಆಯುಷ್ಮಾನ್‌ ಮಾತ್ರ ಸೂಪರ್‌ಸ್ಟಾರ್‌ ಆಗಲು ತಾನು ಮಾಡಬೇಕಾದ್ದು ಇನ್ನೂ ಸಾಕಷ್ಟಿದೆ ಎಂದಿದ್ದಾರೆ.

ಆಯುಷ್ಮಾನ್ ನಟನೆಯ ‘ಮೇರಿ ಪ್ಯಾರಿ ಬಿಂದು’, ‘ಬರೇಲಿ ಕಿ ಬರ್ಫಿ’ ಹಾಗೂ ‘ಶುಭ್ ಮಂಗಲ್ ಸಾವಧಾನ್’ ಚಿತ್ರಗಳು ತೆರೆ ಕಾಣಲು ಸಿದ್ಧವಾಗಿವೆ. ಚಿತ್ರಗಳಲ್ಲಿ ಸಣ್ಣ ಪಟ್ಟಣದ ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳುವುದರಲ್ಲಿ ಸಮಾಧಾನ, ಖುಷಿ ಎರಡೂ ಇದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

‘ಸಿನಿಮಾದಲ್ಲಿನ ಪಾತ್ರಗಳು ಬದಲಾದಂತೆ ಕಲಾವಿದನಾಗಿ ನಮ್ಮಲ್ಲಿಯೂ ಸಾಕಷ್ಟು ಬೆಳವಣಿಗೆ ಆಗಿರಬೇಕು. ಯಾವೆಲ್ಲಾ ಸಿನಿಮಾಗಳನ್ನು ಮಾಡಿದ್ದೇನೆ, ಯಾವೆಲ್ಲಾ ಪಾತ್ರಗಳನ್ನು ಮಾಡಿದ್ದೇನೆ ಎನ್ನುವುದನ್ನು ಆತ್ಮವಿಶ್ವಾಸದಿಂದ ಹೇಳಿಕೊಳ್ಳಬೇಕು. ‘ಓಂಕಾರ್‌’ ಚಿತ್ರದಲ್ಲಿ ಸೈಫ್‌ ಅಲಿಖಾನ್‌ ನಟಿಸಿ ಸಿನಿಮಾ ಜಗತ್ತಿಗೇ ಶಾಕ್‌ ಕೊಟ್ಟರು.

‘ಓಂಕಾರ್‌’ ಹಾಗೂ ‘ಏಕ್‌ ಹಸೀನಾ ಥೀ’ ಸಿನಿಮಾ ಮೂಲಕ ಸೈಫ್‌ ಅವರಿಗಿದ್ದ ಚಾಕೊಲೆಟ್‌ ಬಾಯ್‌ ಇಮೇಜ್‌ ಕಳಚಿ ಅವರಿಗೆ ಪ್ರಬುದ್ಧತೆ ದಕ್ಕಿತ್ತು. ಹೀಗೆ ನಟನಾದವನು ಆಗಾಗ ವಿಭಿನ್ನ ಸಿನಿಮಾಗಳನ್ನು ನೀಡಬೇಕು. ನಾನು ಅದೇ ದಾರಿಯಲ್ಲಿದ್ದೇನೆ ಎಂದಲ್ಲ, ವಿಭಿನ್ನ ಪ್ರಯೋಗಗಳಿಗೆ ತೆರೆದುಕೊಂಡಿದ್ದೇನಷ್ಟೇ’ ಎಂದಿದ್ದಾರೆ.

ಅವರ ಸಿನಿಮಾಗಳು ನಿರಂತರವಾಗಿ ಜನಮನ್ನಣೆ ಗಳಿಸುತ್ತಿದ್ದರೂ ‘ನಾನು ಸೂಪರ್‌ಸ್ಟಾರ್‌ ಅಲ್ಲ. 100ಕೋಟಿ ಬಜೆಟ್‌ನ ಸಿನಿಮಾ ಮಾಡಬೇಕು ಹಾಗೂ ನನ್ನ ಸಿನಿಮಾ ಬಿಡುಗಡೆ ಆಗುವ ದಿನಾಂಕವನ್ನು ನಾನೇ ನಿರ್ಧರಿಸಬೇಕು. ಅಂದು ನಾನು ಸೂಪರ್‌ಸ್ಟಾರ್‌ ಎನಿಸಿಕೊಳ್ಳುತ್ತೇನೆ’ ಎಂದೂ ಹೋಳಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.