ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರೋಡೆ ತಡೆಗೆ ‘ಸ್ಮಾರ್ಟ್‌ ಅಲಾರಾಂ’

Last Updated 3 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬರ್ಲಿನ್‌ : ಗೋಡೆ ಕೆಡಹುವ, ಕಿಟಕಿ ಮುರಿಯುವ ದರೋಡೆಕೋರರ ಸಂಚನ್ನು ವಿಫಲಗೊಳಿಸುವ ‘ಸ್ಮಾರ್ಟ್‌ ಅಲಾರಾಂ’ ವ್ಯವಸ್ಥೆಯನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

ಜರ್ಮನಿಯ ಫ್ರೌನ್‌ಹೋಫರ್‌– ಗೆಸೆಲ್‌ಶ್ಯಾಫ್ಟ್‌ ಸಂಸ್ಥೆಯ ಸಂಶೋಧಕರು ಅಭಿವೃದ್ಧಿಪಡಿಸಿರುವ ಈ ಕರೆಗಂಟೆಯು, ಉಷ್ಣಾಂಶದಲ್ಲಿನ ಬದಲಾವಣೆ, ಕಿಟಕಿ
ಗಳ ಕಂಪನಗಳನ್ನು ಪತ್ತೆ ಹಚ್ಚಿ ಸದ್ದು ಮಾಡುತ್ತದೆ. ಕಲಾ ಗ್ಯಾಲರಿ, ಆಭರಣ ಮಳಿಗೆ ಹಾಗೂ ಬ್ಯಾಂಕ್‌ಗಳು ರಕ್ಷಣೆಗಾಗಿ ಈ ಅಲಾರಾಂ ಹಾಗೂ ಗಾಜಿನ ರಕ್ಷಣಾ ಕವಚ ಅಳವಡಿಸಿಕೊಳ್ಳಬಹುದು.

ಕಟಿಂಗ್‌ ಟಾರ್ಚ್‌ ಅಥವಾ ಡ್ರಿಲ್‌ ಮೂಲಕ ಗಾಜನ್ನು ಹಾನಿಗೊಳಿಸಲು ಪ್ರಯತ್ನಿಸಿದರೆ ಈಗಿನ ರಕ್ಷಣಾ ವ್ಯವಸ್ಥೆಯು ತಡವಾಗಿ ಪ್ರತಿಕ್ರಿಯಿಸುತ್ತದೆ ಅಥವಾ ಪ್ರತಿಕ್ರಿಯಿಸುವುದೇ ಇಲ್ಲ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ದರೋಡೆಕೋರರು, ಹ್ಯಾಮರ್‌ಗೆ ಬದಲಾಗಿ ಇಂತಹ ವಸ್ತುಗಳನ್ನೇ ಗಾಜು ಒಡೆಯಲು ಬಳಸುತ್ತಿದ್ದಾರೆ.

ಆದರೆ ಹೊಸ ರಕ್ಷಣಾ ಕವಚದ ಮೇಲೆ ನಿಧಾನಕ್ಕೆ ಗುದ್ದಿದರೂ ಇದು ಕೂಡಲೇ ಸದ್ದು ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT