ಶನಿವಾರ, ಫೆಬ್ರವರಿ 27, 2021
20 °C

ಚಿನ್ನ ಆಮದು ಸುಂಕ ಕಡಿತ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿನ್ನ ಆಮದು ಸುಂಕ ಕಡಿತ?

ನವದೆಹಲಿ: ಚಿನ್ನದ ಆಮದು ಸುಂಕವನ್ನು ಸದ್ಯದ ಶೇ 10ಕ್ಕಿಂತ ಕಡಿಮೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ನಾಲ್ಕು ವರ್ಷಗಳ ನಂತರ ಸರ್ಕಾರ ಆಮದು ಸುಂಕ ಕಡಿತ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿದೆ. ಆಮದು ತಗ್ಗಿದರೆ ರಫ್ತು ಕುಸಿತ ಸಮಸ್ಯೆ ಎದುರಿಸುತ್ತಿರುವ ಹರಳು ಮತ್ತು ಚಿನ್ನಾಭರಣ ತಯಾರಕರಿಗೆ ನೆರವಾಗಲಿದೆ.

ಸುಂಕ ಕಡಿತ ತಲಾ ಶೇ 2ರ ದರದ ಹಂತಗಳಲ್ಲಿ ಜಾರಿಗೆ ಬರಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂದಿನ ವರ್ಷದ ಬಜೆಟ್‌ ಮಂಡನೆ ಮೊದಲೇ ಈ ನಿರ್ಧಾರ ಜಾರಿಗೆ ತರಲು ಹಣಕಾಸು ಇಲಾಖೆಯು ಸುಳಿವು ನೀಡಿದೆ. ಚಾಲ್ತಿ ಖಾತೆ ಕೊರತೆ ಹೆಚ್ಚಳಕ್ಕೆ ಚಿನ್ನದ ಆಮದು ಗರಿಷ್ಠ ಕೊಡುಗೆ ನೀಡುತ್ತಿರುವುದರಿಂದ ಸರ್ಕಾರ  ಆಮದಿಗೆ ನಿರ್ಬಂಧ ವಿಧಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.