ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಉತ್ತಮ ಮೊತ್ತ

ಹೊನಲು ಬೆಳಕಿನ ಆ್ಯಷಸ್‌ ಟೆಸ್ಟ್‌
Last Updated 3 ಡಿಸೆಂಬರ್ 2017, 20:25 IST
ಅಕ್ಷರ ಗಾತ್ರ

ಅಡಿಲೇಡ್‌, ಆಸ್ಟ್ರೇಲಿಯಾ: ತಾಳ್ಮೆಯ ಬ್ಯಾಟಿಂಗ್ ಮಾಡಿದ ಆರನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ಶಾನ್‌ ಮಾರ್ಷ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಅವರ ಅಮೋಘ ಆಟದ ನೆರವಿನಿಂದ ಆ್ಯಷಸ್‌ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ  ಆಸ್ಟ್ರೇಲಿಯಾ ಉತ್ತಮ ಮೊತ್ತ ಕಲೆ ಹಾಕಿದೆ.

ಆ್ಯಷಸ್‌ ಸರಣಿಯ ಚೊಚ್ಚಲ ಹಗಲು ರಾತ್ರಿ ಪಂದ್ಯದ ಮೊದಲ ದಿನವಾದ ಶನಿವಾರ 4 ವಿಕೆಟ್‌ಗಳಿಗೆ 209 ರನ್ ಗಳಿಸಿದ್ದ ಆತಿಥೇಯರು ಭಾನುವಾರ ಎರಡು ವಿಕೆಟ್‌ ಕಳೆದುಕೊಂಡು 442 ರನ್‌ ಗಳಿಸಿದ್ದಾಗ ಇನಿಂಗ್ಸ್ ಡಿಕ್ಲೇರ್‌ ಮಾಡಿಕೊಂಡಿತು. ಮಳೆಯಿಂದಾಗಿ ದಿನದಾಟ ಬೇಗನೇ ಮುಕ್ತಾಯಗೊಂಡಾಗ ಇಂಗ್ಲೆಂಡ್‌ ಒಂದು ವಿಕೆಟ್ ಕಳೆದುಕೊಂಡು 29 ರನ್‌ ಗಳಿಸಿದೆ. ತಂಡ ಇನ್ನೂ 413 ರನ್‌ಗಳಿಂದ ಹಿಂದೆ ಉಳಿದಿದೆ.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ, ಮೊದಲ ಇನಿಂಗ್ಸ್‌ (ಶನಿವಾರದ ಅಂತ್ಯಕ್ಕೆ 81 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 209): 149 ಓವರ್‌ಗಳಲ್ಲಿ 8ಕ್ಕೆ 442 (ಶಾನ್‌ ಮಾರ್ಷ್‌ 126, ಟಿಮ್ ಪೈನೆ 57, ಪ್ಯಾಟ್‌ ಕಮಿನ್ಸ್‌ 44; ಸ್ಟುವರ್ಟ್‌ ಬ್ರಾಡ್‌ 72ಕ್ಕೆ2, ಕ್ರೇಗ್ ಓವರ್ಟನ್‌ 105ಕ್ಕೆ3);

ಇಂಗ್ಲೆಂಡ್‌, ಮೊದಲ ಇನಿಂಗ್ಸ್‌: 9.1 ಓವರ್‌ಗಳಲ್ಲಿ 1 ವಿಕೆಟ್‌ಗೆ 29 (ಮಾರ್ಕ್ ಸ್ಟೋನ್‌ ಮ್ಯಾನ್‌ 18; ಮಿಚೆಲ್‌ ಸ್ಟಾರ್ಕ್‌ 13ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT