ವಿಶ್ವಕಪ್: ಪೃಥ್ವಿಗೆ ನಾಯಕತ್ವ

ನವದೆಹಲಿ: ಮುಂಬೈ ತಂಡದ ಬ್ಯಾಟ್ಸ್‌ಮನ್ ಪೃಥ್ವಿ ಷಾ 19 ವರ್ಷದೊಳಗಿನವರ ಐಸಿಸಿ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ತಂಡಧ ನಾಯಕತ್ವ ವಹಿಸಲಿದ್ದಾರೆ.
‘ನ್ಯೂಜಿಲೆಂಡ್‌ನಲ್ಲಿ ಜನವರಿ 13ರಿಂದ ಫೆಬ್ರುವರಿ 3ರವರೆಗೆ ಪಂದ್ಯಗಳು ನಡೆಯಲಿವೆ’ ಎಂದು ಮಂಡಳಿಯ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿದ್ದಾರೆ. ಹೋದ ವರ್ಷ ಭಾರತ ತಂಡವು ರನ್ನರ್ ಅಪ್ ಆಗಿತ್ತು. ಬಾಂಗ್ಲಾದೇಶದಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ ವೆಸ್ಟ್‌ಇಂಡೀಸ್ ವಿರುದ್ಧ ಸೋಲು ಕಂಡಿತ್ತು. 2000, 2008, 2012ರಲ್ಲಿ ಭಾರತದ 19 ವರ್ಷದೊಳಗಿನವರ ತಂಡ ವಿಶ್ವಕಪ್ ಗೆದ್ದುಕೊಂಡಿತ್ತು.
ವಿಶ್ವಕಪ್ ಸಿದ್ಧತೆಗಾಗಿ ಭಾರತ ತಂಡ ಶುಕ್ರವಾರದಿಂದ ಬೆಂಗಳೂರಿನಲ್ಲಿ ಅಭ್ಯಾಸ ನಡೆಸಲಿದೆ. ಪೃಥ್ವಿ ಹಾಗೂ ಈಶಾನ್ ಪೊರೆಲ್ ಡಿ.12ರಿಂದ ಶಿಬಿರ ಸೇರಿಕೊಳ್ಳಲಿದ್ದಾರೆ.
ತಂಡ ಇಂತಿದೆ: ಪೃಥ್ವಿ ಷಾ, ಶುಭಂ ಗಿಲ್ (ಉಪ ನಾಯಕ), ಮನ್‌ಜ್ಯೋತ್ ಕಲ್ರಾ, ಹಿಮಾಂಶು ರಾಣಾ, ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ಆರ್ಯನ್ ಜುವಾಲ್ (ವಿಕೆಟ್ ಕೀಪರ್), ಹರ್ವಿಕ್ ದೇಸಾಯಿ (ವಿಕೆಟ್ ಕೀಪರ್), ಶಿವಂ ಮಾವಿ, ಕಮಲೇಶ್ ನಾಗರಕೋಟಿ, ಈಶಾನ್ ಪೊರೆಲ್, ಅರ್ಷದೀಪ್ ಸಿಂಗ್, ಅಂಕುಲ್ ರಾಯ್, ಶಿವ ಸಿಂಗ್, ಪಂಕಜ್ ಯಾದವ್.
ಕಾಯ್ದಿರಿಸಿದ ಆಟಗಾರರು: ಓಂ ಬೋಸ್ಲೆ, ರಾಹುಲ್ ಚಹಾರ್, ನಿನಾದ್ ರಾತ್ವ, ಉರ್ವಿಲ್ ಪಟೇಲ್, ಆದಿತ್ಯ ತಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.