ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಸಿ ಅಥ್ಲೆಟಿಕ್ಸ್‌: ಶ್ರೇಯಸ್‌, ಪ್ರಿಯಾಂಕ ಮಿಂಚು

Last Updated 3 ಡಿಸೆಂಬರ್ 2017, 20:30 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಎಸ್ ಸರ್ದಾರ್ ಪಟೇಲ್‌ ಶಾಲೆಯ ಜಿ.ಶ್ರೇಯಸ್‌ ಮತ್ತು ನ್ಯೂ ಸೇಂಟ್ ಮೇರಿಸ್ ಶಾಲೆಯ ಪ್ರಿಯಾಂಕ ಅವರು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ಮಿಂಚು ಹರಿಸಿದರು. ‘ಡೆಕ್ಕನ್‌ ಹೆರಾಲ್ಡ್‌’ ಮತ್ತು ‘ಪ್ರಜಾವಾಣಿ’ ಬಳಗದ ಪ್ರಾಯೋಜಕತ್ವದಲ್ಲಿ ಡೆಕ್ಕನ್ ಅಥ್ಲೆಟಿಕ್ ಕ್ಲಬ್‌ ಆಯೋಜಿಸಿರುವ ವಾರಾಂತ್ಯ ಅಥ್ಲೆಟಿಕ್‌ ಕೂಟದ ಮೊದಲ ಚರಣದಲ್ಲಿ ಇವರಿಬ್ಬರು ಕ್ರಮವಾಗಿ 18 ಮತ್ತು 16 ವರ್ಷದೊಳಗಿನವರ 800 ಮೀಟರ್ಸ್ ಓಟದಲ್ಲಿ ಚಿನ್ನ ಗೆದ್ದರು.

2:12.0 ನಿಮಿಷದಲ್ಲಿ ಗುರಿ ತಲುಪಿದ ಶ್ರೇಯಸ್ 110 ಮೀಟರ್ಸ್ ಹರ್ಡಲ್ಸ್‌ನಲ್ಲೂ ಚಿನ್ನ ಗೆದ್ದರು. ಪ್ರಿಯಾಂಕ 2:34.3 ನಿಮಿಷದಲ್ಲಿ ಅಂತಿಮ ಗೆರೆ ದಾಟಿದರು. 1500 ಮೀಟರ್ಸ್ ಓಟದಲ್ಲೂ ಅವರು ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು.

ಫಲಿತಾಂಶಗಳು ಬಾಲಕರು: 16 ವರ್ಷದೊಳಗಿನವರ 100 ಮೀಟರ್ಸ್ ಓಟ: ಅಪ್ಪು ಎಸ್‌ (ವಿದ್ಯಾನಿಕೇತನ್‌) 11.5 ಸೆಕೆಂಡ್ಸ್‌–1, ಜಿ.ವಿನಯ್‌ (ಸೌಂದರ್ಯ ಹೈಸ್ಕೂಲ್‌)–2, ಎಂ.ನರಹರಿ ಕೃಪ (ವಿದ್ಯಾನಿಕೇತನ್‌)–3; 800 ಮೀ ಓಟ: ಜಿ.ಶ್ರೇಯಸ್‌ (ವಿವಿಎಸ್‌ ಸರ್ದಾರ್‌ ಪಟೇಲ್ ಶಾಲೆ) 2:12.0 ನಿ–1, ಕೆ.ಸೂರ್ಯ (ಸೇಕ್ರೆಡ್‌ ಹಾರ್ಟ್‌)–2, ವೈ.ಎಸ್.ಅಚ್ಯುತ (ಪಿಎಸ್‌ಬಿಬಿ)–3;  3000 ಮೀ ಓಟ: ಕೆ.ಸೂರ್ಯ (ಸೇಕ್ರೆಡ್ ಹಾರ್ಟ್‌) 10:10.7 ನಿ–1, ಆರ್‌.ಬಸಂತ್‌ (ಸೇಂಟ್‌ ಲಾರೆನ್ಸ್‌)–2, ವಿಜಯ್‌ ಕುಮಾರ್ ರೆಡ್ಡಿ–3; 110 ಮೀ ಹೆರ್ಡಲ್ಸ್‌: ಜಿ.ಶ್ರೇಯಸ್‌ (ವಿವಿಎಸ್‌ ಸರ್ದಾರ್‌ ಪಟೇಲ್‌) 18.2 ಸೆ–1, ಅರವಿಂದ್‌ ಎಂ (ಸೇಂಟ್‌ ಜೋಸೆಫ್ಸ್‌ ಇಂಡಿಯನ್‌ ಸ್ಕೂರ್)–2, ಯಶಸ್‌ ಎಸ್‌ (ಡೆಕ್ಕನ್‌ ಇಂಟರ್‌ನ್ಯಾಷನಲ್‌)–3; ಲಾಂಗ್ ಜಂಪ್‌: ಮಿಹಿರ್‌ ಎ.ಕಾಸ್ಕರ್‌ (ವಿವಿಎಸ್‌ ಸರ್ದಾರ್‌) 5.64 ಮೀ–1, ಮಹಮ್ಮದ್‌ ಫಜಲ್‌ (ಶ್ರೀಮತಿ ಕಮಲಾ ಬಾಯಿ ಶಿಕ್ಷಣ ಸಂಸ್ಥೆ)–2; ಆರ್‌.ಅನುಜ್‌ (ಪಿ.ಎಸ್‌.ಬಿ.ಬಿ)–3; ಟ್ರಿ‍ಪಲ್‌ ಜಂಪ್: ಮಿಹಿರ್‌ ಎ.ಕಾಸ್ಕರ್‌ (ವಿವಿಎಸ್‌ ಸರ್ದಾರ್‌ ಪಟೇಲ್‌) 11.95 ಮೀ–1, ವಿಕ್ರಮ್‌ ವಿ (ಸೇಂಟ್‌ ಜೋಸೆಫ್‌ ಇಂಡಿಯನ್ ಶಾಲೆ)–2, ಆರ್‌.ಅನೂಜ್‌ (ಪಿ.ಎಸ್‌.ಬಿ.ಬಿ)–3; ಹೈ ಜಂಪ್‌: ಆದಿ ಕೇಶವ ಕೆ (ಡೆಕ್ಕನ್‌ ಇಂಟರ್‌ನ್ಯಾಷನಲ್‌ ಶಾಲೆ)1.39 ಮೀ–1; ಹರ್ಷಿತಾ ಎಂ.ಜಿ (ಕಾರ್ಮೆಲ್ ಶಾಲೆ)–2, ಮುಸವೀರ್‌ ಎಂ.ಷರೀಫ್‌ (ಶ್ರೀಮತಿ ಕಮಲಾ ಬಾಯಿ ಶಾಲೆ)–3; ಶಾಟ್‌ಪಟ್‌: ಆದಿತ್ಯ ರಾಜ್ ಕೆ (ಡೆಕ್ಕನ್‌ ಇಂಟರ್‌ನ್ಯಾಷನಲ್‌) 10.20ಮೀ–1, ನರಹರಿ ಕೃಪ ಎಂ (ವಿದ್ಯಾನಿಕೇತನ)–2, ಪ್ರೇಮ್‌ ಸಿಂಗ್ ಪಿ.ಆರ್‌ (ಕಾರ್ಮೆಲ್‌)–3.

13 ವರ್ಷದೊಳಗಿನವರು: 100 ಮೀ ಓಟ: ಪ್ರದ್ಯುಮ್ನ ಎಸ್‌ (ವಿದ್ಯಾನಿಕೇತನ) 13.6 ಸೆ–1, ಎಸ್‌.ಶ್ರೀರಾಮ್‌ (ಕೆನ್‌ಸ್ರಿ)–2, ಪರೀಕ್ಷಿತ್‌ ಕೆ (ಎಚ್‌ಎಎಲ್‌ ಪಬ್ಲಿಕ್ ಶಾಲೆ)–3; 800 ಮೀ ಓಟ: ಶಿವಕುಮಾರ್‌ ಕೆ (ನ್ಯೂ ಸೇಂಟ್ ಮೇರಿಸ್‌) 2:34.8ನಿ–1, ಶರಣ್ ಶೆಟ್ಟಿ (ನ್ಯೂ ಸೇಂಟ್ ಮೇರಿಸ್‌)–2, ಬಲದೇವ ಪಿ.ದಾಸ್‌ (ಸೌಂದರ್ಯ ಶಾಲೆ)–3; 3000 ಮೀ ಓಟ: ಶಿವಕುಮಾರ್‌ (ನ್ಯೂ ಸೇಂಟ್‌ ಮೇರಿಸ್‌)–11:18.5ನಿ–1; ನಿಖಿಲ್‌ ಸಿ (ನ್ಯೂ ಸೇಂಟ್‌ ಮೇರಿಸ್‌)–2, ಯಶವಂತ್ ಎಸ್‌.ಎಚ್‌ (ನ್ಯೂ ಸೇಂಟ್‌ ಮೇರಿಸ್‌)–3; 80 ಮೀ ಹರ್ಡಲ್ಸ್‌: ಅಭಿಮನ್ಯು ಕೆ (ಡೆಕ್ಕನ್‌ ಇಂಟರ್‌ನ್ಯಾಷನಲ್‌) 14:6ಸೆ–1, ಪರೀಕ್ಷಿತ್‌ ಕೌಶಿಕ್‌ (ಎಚ್‌ಎಎಲ್ ಪಬ್ಲಿಕ್‌)–2, ರಾಘವೇಂದ್ರ ಎಸ್‌ (ನ್ಯೂ ಸೇಂಟ್‌ ಮೇರಿಸ್‌)–3; ಲಾಂಗ್‌ಜಂಪ್‌: ಅದಿತ್‌ ವಿಶ್ವನಾಥ್‌ ಎಸ್‌ (ನ್ಯಾಷನಲ್‌ ಪಬ್ಲಿಬ್‌ ಶಾಲೆ) 4.70 ಮೀ–1, ಎಸ್‌.ಶ್ರೀರಾಮ್‌ (ಕೆನ್‌ಸ್ರಿ)–2, ಶ್ರೇಯಸ್‌ (ಶ್ರೀ ಕುಮಾರನ್ಸ್‌ ಚಿಲ್ಡ್ರನ್ಸ್‌ ಹೋಮ್‌)–3; ಟ್ರಿಪಲ್ ಜಂಪ್‌: ಅದಿತ್ ವಿಶ್ವನಾಥ ಎಸ್‌ (ನ್ಯಾಷನಲ್‌ ಪಬ್ಲಿಕ್ ಶಾಲೆ) 10.32ಮೀ–1, ತುಷಾರ್‌ ಎನ್‌ (ಆಕ್ಸ್‌ಫರ್ಡ್‌)–2, ಎಂ.ದರ್ಶನ್‌ (ಹೋಲಿ ಏಂಜೆಲ್ಸ್‌)–3; ಹೈಜಂಪ್‌: ಅಭಿಮನ್ಯು ಕಲ್ಯಾಣಿ (ಡೆಕ್ಕನ್‌ ಇಂಟರ್‌ನ್ಯಾಷನಲ್‌) 1.29ಮೀ–1, ಪ್ರದ್ಯುಮ್ನ ಎಸ್‌ (ವಿದ್ಯಾನಿಕೇತನ್‌)–2, ಅದಿತಿ ಶೆಟ್ಟಿ (ವಿದ್ಯಾನಿಕೇತನ್‌)–3; ಶಾಟ್‌ಪಟ್‌: ಸೋಮಿತಿಂಜಯ್‌ (ಡೆಕ್ಕನ್ ಇಂಟರ್‌ನ್ಯಾಷನಲ್‌) 7.82 ಮೀ–1, ದಿವಾಕರ್‌ ಬಾಬು (ನ್ಯೂ ಸೇಂಟ್ ಮೇರಿಸ್‌)–2, ಆಳ್ವಾ ಬಿ.ಜಿ (ವಿದ್ಯಾನಿಕೇತನ್‌)–3.

ಬಾಲಕಿಯರು: 15 ವರ್ಷದೊಳಗಿನವರ 100 ಮೀ ಓಟ: ನಿಯೊಲಿ ಅನ್ನಾ ಕಾರ್ನೊಲಿಯೊ (ಸೇಂಟ್‌ ಫ್ರಾನ್ಸಿಸ್‌) 12.6 ಸೆ–1, ಬಿ.ಉನ್ನತಿ (ಬಾಲ್ಡ್‌ವಿನ್‌)–2, ಪ್ರಿಯಾ ಎಚ್‌. ಮೋಹನ್‌ (ಸೇಂಟ್ ಫ್ರಾನ್ಸಿಸ್‌)–3; 800 ಮೀ ಪ್ರಿಯಾಂಕ (ನ್ಯೂ ಸೇಂಟ್‌ ಮೇರಿಸ್‌) 2:34.3ನಿ–1, ಜಾಹ್ನವಿ ಬಿ.ಜಿ (ಸೌಂದರ್ಯ ಶಾಲೆ)–2, ಶ್ಲೋಕ ಮೂರ್ತಿ (ಶ್ರೀ ಕುಮಾರನ್ಸ್ ಚಿಲ್ಡ್ರನ್‌ ಹೋಮ್‌)–3, 1500 ಮೀ ಪ್ರಿಯಾಂಕ (ನ್ಯೂ ಸೇಂಟ್ ಮೇರಿಸ್‌) 5:25.0ನಿ–1, ಶ್ಲೋಕ ಮೂರ್ತಿ (ಶ್ರೀ ಕುಮಾರನ್ಸ್‌)–2, ಜಾಹ್ನವಿ ಬಿ.ಜಿ (ಸೌಂದರ್ಯ ಶಾಲೆ)–3; 100 ಮೀ ಹರ್ಡಲ್ಸ್‌: ಆರ್ಯಾ ಪ್ರದೀಪ್ (ಶ್ರೀ ಕುಮಾರನ್ಸ್‌) 17.5ಸೆ–1, ಚೈತನ್ಯ ಎಚ್‌.ಡಬ್ಲ್ಯು(ಸೇಂಟ್‌ ಫ್ರಾನ್ಸಿಸ್‌)–2, ತೇಜಸ್ವಿನಿ ಜಿ (ಸೇಂಟ್ ಫ್ರಾನ್ಸಿಸ್‌)–3; ಲಾಂಗ್‌ಜಂಪ್‌: ಬಿ.ಉನ್ನತಿ ಅಯ್ಯಪ್ಪ (ಬಾಲ್ಡ್‌ವಿನ್‌) 4.80 ಮೀ–1, ರೀತು ಎನ್‌ (ಕ್ಲಿನಿ ಕಾನ್ವೆಂಟ್ ಹೈಸ್ಕೂಲ್‌)–2, ಅರುಂಧತಿ ಟಿ.ಎಸ್‌ (ಎಚ್‌ಎಎಲ್‌ ಪಬ್ಲಿಕ್‌ ಸ್ಕೂಲ್‌)–3; ಟ್ರಿಪಲ್‌ ಜಂಪ್‌: ಆರ್ಯಾ ಪ್ರದೀಪ್‌ (ಶ್ರೀ ಕುಮಾರನ್ಸ್‌) 11.01 ಮೀ–1. ತಾರುಣ್ಯ ಪ್ರಸಾದ್‌ (ಬಿಷಪ್‌ ಕಾಟನ್‌)–2, ನಿಯೋಲೆ ಅನ್ನಾ ಕಾರ್ನೊಲಿಯೊ (ಸೇಂಟ್‌ ಫ್ರಾನ್ಸಿಸ್‌ ಶಾಲೆ)–3; ಹೈಜಂಪ್‌: ಸ್ಫೂರ್ತಿ ಕೆ.ಸಿ (ವಿದ್ಯಾನಿಕೇತನ್‌) 1.50ಮೀ–1, ಜ್ಞಾನಶ್ರೀ (ವಿದ್ಯಾನಿಕೇತನ್‌)–2, ತಾರುಣ್ಯ ಪ್ರಸಾದ್‌ (ಬಿಷಪ್‌ ಕಾಟನ್‌)–3; ಶಾಟ್‌ಪಟ್‌: ತಾರ ಆನಂದ್‌ (ವಿದ್ಯಾಶಿಲ್ಪ) 8.45 ಮೀ–1, ಶ್ರೀಯಾ ರಾಜ್‌ (ಶ್ರೀ ಶ್ರೀ ರವಿಶಂಕರ್‌ ವಿದ್ಯಾಮಂದಿರ)–2, ಅನನ್ಯಾ ತೇಜಸ್‌ ವೋರಾ (ಬಿಷಪ್‌ ಕಾಟನ್‌)–3; 12 ವರ್ಷದೊಳಗಿನವರ 100 ಮೀ ಓಟ: ತೇಜಶ್ರೀ ಆರ್‌.ವಿ (ಸೇಂಟ್ ಫ್ರಾನ್ಸಿಸ್‌) 14.2ಸೆ–1, ಜನಿಸ್ ರೊಸಾರಿಯೊ (ಸೇಂಟ್ ಫ್ರಾನ್ಸಿಸ್‌)–2, ಆ್ಯಂಡ್ರಿಯಾ ಎಮ್‌.ಫರ್ಡಿನಂಡ್‌ (ಕ್ಲಾರನ್ಸ್‌ ಪಬ್ಲಿಕ್‌ ಸ್ಕೂಲ್‌)–3; 800 ಮೀ ಓಟ: ಗಿರಿಜಾ ಶ್ರೀ ಬಾಲಾಂಬಿಕ (ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ) 2:48.6ನಿ–1, ರಚನಾ ನಾಯಕ್‌ (ಸೌಂದರ್ಯ ಹೈಸ್ಕೂಲ್‌)–2, ಹರ್ಷಿತಾ ಎಸ್‌ (ಹೋಲಿ ಏಂಜೆಲ್ಸ್‌ ಶಾಲೆ)–3; 1500 ಮೀ ಓಟ: ರಚನಾ ನಾಯಕ್‌ (ಸೌಂದರ್ಯ ಶಾಲೆ) 6:14.6 ನಿ–1, ನಿಹಿರಾ ಮ್ಯಾಥ್ಯೂ (ಸೇಂಟ್ ಫ್ರಾನ್ಸಿಸ್‌)–2, ಹರ್ಷಿತಾ ಎಸ್‌ (ಹೋಲಿ ಏಂಜೆಲ್ಸ್‌)–3; 60 ಮೀ ಹರ್ಡಲ್ಸ್‌: ಇಶಾ ಎಲಿಜಬೆತ್‌ (ವಿಬ್‌ಗ್ಯೋರ್‌) 12.7 ಸೆ–1, ದೀಪಿಕಾ ಸೆಲೆಸ್‌ ಪಿ.ಎಸ್‌ (ಹೋಲಿ ಏಂಜೆಲ್ಸ್‌)–2, ಮೃಣಾಲಿ ಮುಖರ್ಜಿ (ಔರೊ ಮಿರಾ ಇಂಟರ್‌ನ್ಯಾಷನಲ್‌ ಶಾಲೆ)–3; ಲಾಂಗ್‌ಜಂಪ್‌: ನಯನ್‌ತಾರಾ ಮುಖರ್ಜಿ (ಔರೊ ಮಿರಾ ಶಾಲೆ) 4.02 ಮೀ –1, ಹಲೀಮಾ ಫಜಿಲತ್‌ (ಸೇಂಟ್ ಫ್ರಾನ್ಸಿಸ್‌)–2, ಜಾನಿಸ್ ರೊಸಾರಿಯೊ (ಸೇಂಟ್ ಫ್ರಾನ್ಸಿಸ್‌)–3; ಟ್ರಿಪಲ್ ಜಂಪ್‌: ತನ್ಮಯ ಪ್ರಸಾದ್‌ (ಬಿಷಪ್‌ ಕಾಟನ್‌ ಶಾಲೆ) 8.14 ಮೀ–1, ಗಿರಿಜಾ ಶ್ರೀ ಬಾಲಾಂಬಿಕ (ಶ್ರೀ ಜ್ಞಾನಾಕ್ಷಿ)–2, ಎಸ್‌.ವಿ ಉಮಾಶ್ರೀ (ಹೋಲಿ ಏಂಜೆಲ್ಸ್‌)–3; ಹೈಜಂಪ್‌: ಸಮೀಕ್ಷಾ ಎಂ.ಜಿ (ವಿದ್ಯಾನಿಕೇತನ) 1.17 ಮೀ–1, ಅದಿತಿ ಕಾರಂತ್‌ (ವಿದ್ಯಾನಿಕೇತನ್‌)–2, ಸಯೀದಾ ತಾಯ್ಬಾ (ಕಮಲಾಬಾಯಿ ಶಿಕ್ಷಣ ಸಂಸ್ಥೆ)–3; ಹೈಜಂಪ್‌: ಸಮೀಕ್ಷಾ ಎಂ.ಜಿ (ವಿದ್ಯಾನಿಕೇತನ್‌) 1.17 ಮೀ–1, ಅದಿತಿ ಕಾರಂತ್‌ (ವಿದ್ಯಾನಿಕೇತನ್‌)–2, ಸಯೀದಾ ತಾಯ್ಬಾ (ಕಮಲಾಬಾಯಿ ಶಿಕ್ಷಣ ಸಂಸ್ಥೆ)–3; ಶಾಟ್‌ಪಟ್‌: ಐಶ್ವರ್ಯಾ ಆರ್‌.ಕೆ (ಡೆಕ್ಕನ್‌ ಇಂಟರ್‌ನ್ಯಾಷನಲ್‌ ಶಾಲೆ) 6.85 ಮೀ–1, ಸುನೇತ್ರಾ ಎಂ (ವಿದ್ಯಾನಿಕೇತನ್‌)–2, ತನ್ವಿ ಪಿ (ವಿಬ್‌ಗ್ಯೋರ್‌)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT