7

ಮಳೆಗೆ ಹಾಳಾದ ರಾಗಿ ಫಸಲು

Published:
Updated:
ಮಳೆಗೆ ಹಾಳಾದ ರಾಗಿ ಫಸಲು

ಕನಕಪುರ: ಕಳೆದ ಮೂರು ದಿನಗಳಿಂದ ಬೀಳುತ್ತಿರುವ ಚಂಡಮಾರುತ ಮಳೆಗೆ ತಾಲ್ಲೂಕಿನ ನೂರಾರು ಎಕರೆಯಷ್ಟು ಭೂಮಿ ಯಲ್ಲಿ ಕಟಾವು ಮಾಡಿದ್ದ ರಾಗಿ ಫಸಲು ನಾಶವಾಗಿದೆ.

ಬಿಸಿಲು ಚೆನ್ನಾಗಿ ಬೀಳುತ್ತಿದ್ದರಿಂದ ಮಳೆ ಬರುವುದಿಲ್ಲ ಎಂಬ ನಂಬಿಕೆಯಿಂದ ಸಾಕಷ್ಟುರೈತರು ತಮ್ಮ ರಾಗಿ ಫಸಲು ಕಟಾವು ಮಾಡಿದ್ದರು. ಇನ್ನು ಕೆಲವು ರೈತರು ಮಳೆ ಬರುಬಹುದೆಂಬ ಭಯದಿಂದ ಕಟಾವು ಮಾಡದೆ ಹಾಗೆಯೇ ಬಿಟ್ಟಿದ್ದರು.

ದುರಂತವೆಂದು ಕಟಾವು ಮಾಡಿದ್ದ ರಾಗಿ ಮೆಳೆಯಲ್ಲಿ ನೆನೆದು ಹಾಳಾಗುತ್ತಿದ್ದರೆ, ಕಟಾವು ಮಾಡಿದೆ ಬಿಟ್ಟಿದ್ದ ರಾಗಿಯೂ ಅವಧಿ ಮುಗಿದು ಪೈರುಗಳಲ್ಲೇ ಹಾಳಾಗುತ್ತಿದೆ ಎಂದು ರೈತರು ತಮ್ಮ ಕಷ್ಟವನ್ನು ಹೇಳುತ್ತಿದ್ದಾರೆ.

ಈ ಭಾರಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಮೂರು ವರ್ಷದ ಫಸಲು ಒಂದೇ ವರ್ಷಕ್ಕೆ ಬಂದಿದೆ ಎಂಬ ಖುಷಿ ರೈತರ ಮನಸ್ಸಿನಲ್ಲಿ ಮೂಡಿತ್ತು. ಆದರೆ ಮಧ್ಯಂತರದಲ್ಲಿಬಂದ ಮಳೆಯಿಂದ ಎಲ್ಲಾ ಫಸಲು ನಾಶವಾಗಿ ಸಾಕಷ್ಟು ನಷ್ಟವಾಗಿದೆ ಎಂಬುದು ರೈತರ ನೋವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry