7

₹29ಕೋಟಿ ವೆಚ್ಚದಲ್ಲಿ ತಾಂಡಾಗಳ ಅಭಿವೃದ್ಧಿ

Published:
Updated:

ಆಳಂದ: ತಾಲ್ಲೂಕಿನ 32 ತಾಂಡಾಗಳಲ್ಲಿ ವಿವಿಧ ಯೋಜನೆಗಳಲ್ಲಿ ಅಂದಾಜು ₹29 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಗಿದೆ ಎಂದು ಶಾಸಕ ಬಿ.ಆರ್.ಪಾಟೀಲ ಹೇಳಿದರು.

ಪಟ್ಟಣದ ಪ್ರಮುಖ ವಿಠಲರಾವ ಪಾಟೀಲ ನಿವಾಸದಲ್ಲಿ ಶನಿವಾರ ತಾಲ್ಲೂಕಿನ ವಿವಿಧ ತಾಂಡಾಗಳಿಂದ ಯುವಕರು ಕಾಂಗ್ರೆಸ್‌ ಸೇರ್ಪಡೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರವು ಪರಿಶಿಷ್ಟ ಜಾತಿ, ಪಂಗಡದ ಜನರ ಅಭಿವೃದ್ಧಿಗೆ ಶೇ 25ರಷ್ಟು ಅನುದಾನ ಮೀಸಲಿಡುವ ಕ್ರಾಂತಿಕಾರಕ ಕಾನೂನು ಜಾರಿಗೆ ತಂದಿದೆ. ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಸರ್ಕಾರ ತೀರ್ಮಾನಿಸಿದೆ ಎಂದರು.

ಆಳಂದ ತಾಲ್ಲೂಕಿನಲ್ಲಿ ಮುಂಬರುವ ಜೂನ್‌ನಲ್ಲಿ ₹8ಕೋಟಿ ಅನುದಾನದಲ್ಲಿ ಪಾಲಿಟೆಕ್ನಿಕ್‌ ಕಾಲೇಜು, ಗುಲಬರ್ಗಾ ವಿ.ವಿ.ಯಿಂದ ಸ್ನಾತಕೋತ್ತರ ಕೇಂದ್ರ ಸ್ಥಾಪನೆಯಾಗಲಿದೆ. ಲಂಬಾಣಿ ಸಮುದಾಯದ ಬೇಡಿಕೆಯಂತೆ ಸೇವಾಲಾಲರ ಭವನ, ಮೂರ್ತಿ ಸ್ಥಾಪಿಸುವುದಾಗಿ ಶಾಸಕ ಪಾಟೀಲ ಭರವಸೆ ನೀಡಿದರು.

ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ ಪಾಟೀಲ, ಮುಖಂಡ ಗುರುಶರಣ ಪಾಟೀಲ, ಸುಭಾಷ ಪೌಜಿ, ವಿಜಯ ನಾಯಕ ಭೂಸನೂರು ಮಾತನಾಡಿ, ‘ಶಾಸಕ ಪಾಟೀಲರ ಅಭಿವೃದ್ಧಿ ಬಗೆಗೆ ಅಪಾರ ಕಾಳಜಿ ಹೊಂದಿದ್ದಾರೆ. ಅವರನ್ನು ಎಲ್ಲ ಸಮುದಾಯಗಳು ಬೆಂಬಲ, ಸಹಕಾರ ನೀಡಲಿವೆ’ ಎಂದರು.

ಬಂಜಾರಾ ಕ್ರಾಂತಿದಳ ಅಧ್ಯಕ್ಷ ರಾಜು ಚವ್ಹಾಣ್, ಪಪ್ಪು ಯಾದವ, ಸುರೇಶ ಪವಾರ ನೇತೃತ್ವದಲ್ಲಿ ನೂರಾರು ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ತಾ.ಪಂ ಸದಸ್ಯ ಶಿವಪ್ಪ ವಾರಿಕ, ಬಿ.ಕೆ.ಡಗೆ, ಸಂಜಯ ನಾಯಕ, ಶಿವಾಜಿ ರಾಠೋಡ, ಮಲ್ಲಪ್ಪ ಹತ್ತರಕಿ, ಲಿಂಗರಾಜ ಪಾಟೀಲ, ಸಿದ್ದುಗೌಡ ಗುಳ್ಳೋಳ್ಳಿ, ಪಂಡಿತ ಶೇರಿಕಾರ, ಬಸವರಾಜ ಚೌಲ, ಬಾಬು ಪವಾರ ಇದ್ದರು. ತಾಲ್ಲೂಕಿನ ಮಾಡಿಯಾಳ, ಭೂಸನೂರು, ಮಟಕಿ, ಹೆಬಳಿ, ತೀರ್ಥ ಮತ್ತಿತರ ತಾಂಡಾದ ಯುವಕರಿಗೆ ಕಾಂಗ್ರೆಸ್‌ ಧ್ವಜ ನೀಡಿ ಪಕ್ಷಕ್ಕೆ ಸೇರ್ಪಡೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry