7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

‘ಸರ್ಕಾರಿ ಸೌಲಭ್ಯ ಅರ್ಹರಿಗೆ ಸಿಗಲಿ’

Published:
Updated:

ಕಾರಟಗಿ: ‘ಸಾರ್ವಜನಿಕ ಅಭಿವೃದ್ದಿಗೆ ಎಲ್ಲರೂ ಜೊತೆಗೂಡಬೇಕು. ಕೀಳುಮಟ್ಟ ಹಾಗೂ ಸ್ವಾರ್ಥದ ಯೋಚನೆಗಳನ್ನು ದೂರ ಮಾಡಿ ಜನರಿಗೆ ಸಾಧ್ಯವಾದಷ್ಟು ನೆರವಾಗಬೇಕು’ ಎಂದು ಅಂಚೆ ಕಚೇರಿ ನಿವೃತ್ತ ಅಧಿಕಾರಿ ಕೆ. ಈರಣ್ಣ ಗಂಗಾವತಿ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ‘ಪ್ರಗತಿ ಅಬಿವೃದ್ಧಿ ಸಂಸ್ಥೆ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸ್ವಜಾತಿಯ ಅನೇಕ ಸಂಘಟನೆಗಳು ಅಲ್ಲಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಗತಿ ಅಭಿವೃದ್ದಿ ಸಂಸ್ಥೆ ಸ್ವಾರ್ಥ, ಆಮಿಷಕ್ಕೆ ಬಲಿಯಾಗದೆ ಸರ್ಕಾರದ ಸೌಲಭ್ಯಗಳನ್ನು ಅಗತ್ಯವಿರುವವರಿಗೆ ತಲುಪಿಸಬೇಕು’ ಎಂದರು.

ವೀರೇಶ ಸೀಗೆರಿ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು. ಸಹಾಯಕ ಸಬ್ ಇನ್‌ಸ್ಪೆಕ್ಟರ್ ಮಾನಯ್ಯ ಬಡಿಗೇರ , ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶರಣಪ್ಪ ಕರಡಿ, ಸೋಮಶೇಖರ ಮೈಲಾಪುರ, ಸುಮಾ ಗುಂಡಪ್ಪ, ದೀಪಾ ಶಂಕರನಾಗ, ಸಂಸ್ಥೆಯ ಅಧ್ಯಕ್ಷ ಸಿ. ಸಣ್ಣ ಮಾರೆಪ್ಪ, ಉಪಾದ್ಯಕ್ಷ ಹನುಮೇಶ ನಾಯಕ, ಪ್ರಧಾನ ಕಾರ್ಯದರ್ಶಿ ಎ. ಎಚ್. ನಾಗರಾಜ, ಸದಸ್ಯರಾದ ಹನುಮೇಶ ದೇವಿಕ್ಯಾಂಪ, ಬಸವರಾಜ, ಪರಶುರಾಮ, ಕೆ. ರಮೇಶ, ಶಿವರಾಜ, ದೊಡ್ಡಪ್ಪ, ರಾಜಣ್ಣ, ಜಯಸಿಂಗ ಯರಡೋಣ, ಲಕ್ಷ್ಮಣ, ವೆಂಕಟೇಶ, ಶ್ಯಾಮಣ್ಣ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry