7

ಜಿಲ್ಲಾಸ್ಪತ್ರೆಯ ಶೌಚಾಲಯ ತೊಳೆದ ಸಂಸದರ ಮಗ

Published:
Updated:
ಜಿಲ್ಲಾಸ್ಪತ್ರೆಯ ಶೌಚಾಲಯ ತೊಳೆದ ಸಂಸದರ ಮಗ

ಕೊಪ್ಪಳ: ಸಂಸದ ಸಂಗಣ್ಣ ಕರಡಿ ಅವರ ಪುತ್ರ ಅಮರೇಶ ಕರಡಿ ಅವರು ಭಾನುವಾರ ಇಲ್ಲಿನ ಜಿಲ್ಲಾ ಆಸ್ಪತ್ರೆಯ ಶೌಚಾಲಯ ಸ್ವಚ್ಛಗೊಳಿಸಿದರು.  ಯುವ ಬ್ರಿಗೇಡ್‌ನ ‘ಸ್ವಚ್ಛತೆಯೇ ಆರೋಗ್ಯ’ ಕಾರ್ಯಕ್ರಮದಡಿ ಯುವ ಬ್ರಿಗೇಡ್‌ ಮುಖಂಡ ಚಕ್ರವರ್ತಿ ಸೂಲಿಬೆಲೆ ಮತ್ತು ತಮ್ಮ ಬೆಂಬಲಿಗರ ಜತೆ ಅಮರೇಶ ಅವರು ಸರ್ಕಾರಿ ಆಸ್ಪತ್ರೆಗೆ ತೆರಳಿದರು.

‘ಆಸ್ಪತ್ರೆಯ ಹೆರಿಗೆ ವಾರ್ಡ್‌, ಮೂರು ಮಹಡಿಗಳ ಒಂದೊಂದು ವಾರ್ಡ್‌ನ ಶೌಚಾಲಯಗಳನ್ನು ಸ್ವಚ್ಛಗೊಳಿಸಿದರು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದಾನರಡ್ಡಿ ತಿಳಿಸಿದರು.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಇರಲ್ಲ ಎಂಬ ದೂರು ನಿರಂತರವಾಗಿ ಕೇಳಿ ಬರುತ್ತಿವೆ. ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರಣೆಗೊಂಡು ಜಿಲ್ಲಾ ಆಸ್ಪತ್ರೆ ಸ್ವಚ್ಛತೆಗೆ ಮುಂದಾಗಿದ್ದೇವೆ. ಆಸ್ಪತ್ರೆ, ಸಾರ್ವಜನಿಕ ಸ್ಥಳಗಳನ್ನು ಶುಚಿಯಾಗಿಡಬಹುದು ಎಂದು ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ಅಮರೇಶ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry