7

ಜತ್ತಿ ಸ್ವಗ್ರಾಮದಲ್ಲಿ ಬಸ್‌ ನಿಲ್ದಾಣವೇ ಇಲ್ಲ!

Published:
Updated:
ಜತ್ತಿ ಸ್ವಗ್ರಾಮದಲ್ಲಿ ಬಸ್‌ ನಿಲ್ದಾಣವೇ ಇಲ್ಲ!

ಸಾವಳಗಿ: ಗ್ರಾಮದ ಬಹುದಿನಗಳ ಬೇಡಿಕೆಯಾಗಿರುವ ಬಸ್‌ ನಿಲ್ದಾಣದ ಕನಸಾಗಿಯೇ ಉಳಿದಿದೆ. ಸುಮಾರು ವರ್ಷಗಳಿಂದ ಗ್ರಾಮಸ್ಥರು ಈ ಕುರಿತು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಮುಖ್ಯಮಂತ್ರಿ ಹಾಗೂಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಸಿದ ಬಿ.ಡಿ. ಜತ್ತಿ ಅವರ ಸ್ವಗ್ರಾಮದಲ್ಲಿ ಇಂದಿಗೂ ಬಸ್‌ ನಿಲ್ದಾಣ ಇಲ್ಲದಿರುವುದು ವಿಪರ್ಯಾಸದ ಸಂಗತಿ.

ಇಲ್ಲಿಗೆ ಬರುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸ್ಥಳವಿಲ್ಲದೆ ಪರದಾಡುವಂತಾಗಿದೆ. ಜಮಖಂಡಿ, ಅಥಣಿ, ವಿಜಯಪುರ, ಮಹಾರಾಷ್ಟ್ರದ ಜತ್ತ, ಗುಡ್ಡಾಪುರಕ್ಕೆ ಹೋಗುವ ಬಸ್‌ಗಳು ಇಲ್ಲಿಗೆ ಬಂದು ಹೋಗುತ್ತವೆ. ಹೀಗಾಗಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಭೇಟಿ ನೀಡುತ್ತಾರೆ. ಬಸ್‌ಗಳಿಗಾಗಿ ಬಿಸಿಲಿನಲ್ಲಿಯೇ ನಿಲ್ಲಬೇಕಾಗುತ್ತದೆ ಎಂದು ನಾಗರಿಕರು ದೂರುತ್ತಾರೆ.

ಶಾಸಕರ ನಿರ್ಲಕ್ಷ್ಯ: ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಸ್‌ ನಿಲ್ದಾಣ ನಿರ್ಮಾಣ ಮಾಡುವುದಾಗಿ ಶಾಸಕ ಸಿದ್ದು ನ್ಯಾಮಗೌಡ ಅವರು ಭರವಸೆ ನೀಡಿದ್ದರು. ಆದರೆ ಜಾಗದ ಸಮಸ್ಯೆ ನೆಪ ಹೇಳುತ್ತಿದ್ದರು. ಸದ್ಯ ಗ್ರಾಮ ಪಂಚಾಯ್ತಿಯಿಂದ 2 ಎಕರೆ ಜಾಗವನ್ನು ನೀಡಲಾಗಿದೆ. ಶಾಸಕರು ಮಾತ್ರ ತಮ್ಮ ಭರವಸೆಯನ್ನು ಮುಂದೂಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

* * 

ಬಸ್‌ ನಿಲ್ದಾಣಕ್ಕೆ ಸೂಕ್ತ ಜಾಗವನ್ನು ಗ್ರಾಮ ಪಂಚಾಯ್ತಿಯಿಂದ ನೀಡಲಾಗಿದೆ. ಕೆಲವೇ ತಿಂಗಳಲ್ಲಿ ಭೂಮಿ ಪೂಜೆ ನೆರವೇರಿಸುವುದಾಗಿ ಶಾಸಕ ಸಿದ್ದು ನ್ಯಾಮಗೌಡ ತಿಳಿಸಿದ್ದಾರೆ

ಸುಭಾಷ ಪಾಟೋಳಿ, ಅಧ್ಯಕ್ಷ, ಸಾವಳಗಿ ಗ್ರಾಮ ಪಂಚಾಯ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry