7

ಅಂಕವಿಕಲರಿಗೆ ಅವಕಾಶ ಅಗತ್ಯ

Published:
Updated:

ಹುಕ್ಕೇರಿ: ಅಂಗವಿಕಲತೆ ಶಾಪವಲ್ಲ, ಅವರಲ್ಲಿ ವಿಶೇಷ ಶಕ್ತಿ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಬರುವಂತೆ ಮಾಡಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಗಂಗಾಧರಸ್ವಾಮಿ ತವಗಮಠ ಹೇಳಿದರು.

ಅವರು ಸ್ಥಳೀಯ ಗಾಂಧಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದಿಂದ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅಂಗವಿಕಲ ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಕೊಟ್ಟಲ್ಲಿ ಅವರು ಸಾಮಾನ್ಯ ಮಕ್ಕಳನ್ನು ಮೀರಿಸುವಂತಾಗುತ್ತಾರೆ. ಅದಕ್ಕಾಗಿ ಪಾಲಕರು ಮತ್ತು ಶಿಕ್ಷಕರು ಆ ನಿಟ್ಟಿನಲ್ಲಿ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಪುರಸಭೆ ಉಪಾಧ್ಯಕ್ಷ ಗುರುರಾಜ ಕುಲಕರ್ಣಿ ಹೇಳಿದರು.

ಅಂಗವೈಕಲ್ಯ ಮೆಟ್ಟಿ ನಿಂತು ಜಗತ್ಪ್ರಸಿದ್ಧರಾದ ಸಾಧಕರ ಕುರಿತು ತಿಳಿದುಕೊಳ್ಳುವಂತೆ ಅಂಗವಿಕಲ ಮಕ್ಕಳು ಹಾಗೂ ಪಾಲಕರಿಗೆ ಸಲಹೆ ನೀಡಿದರು. ಅತಿಥಿಯಾಗಿದ್ದ ಶಿಕ್ಷಕರ ಸಂಘದ ಪದಾಧಿಕಾರಿ ಬಿ.ಎ. ಸರಿಕರ ಮತ್ತು ಬಿಇಒ ಉಮಾದೇವಿ ಬಸ್ಸಾಪೂರೆ, ನೋಡಲ್ ಅಧಿಕಾರಿ ತಮ್ಮಣ್ಣವರ ಅವರು ಮಾತನಾಡಿ ’ಪಂಡಿತ ಪುಟ್ಟರಾಜ ಗವಾಯಿ ಅವರ ಸಾಧನೆ’ ಕುರಿತು ತಿಳಿಸಿದರು.

ಅಂಗವಿಕಲರ ನೌಕರರ ಸಂಘದ ಅಧ್ಯಕ್ಷ ಮಹಾಂತೇಶ ಹಿರೇಮಠ ಉಪನ್ಯಾಸ ನೀಡಿದರು. ನಂತರ ಮಕ್ಕಳು ಹಾಗೂ ಪಾಲಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದರು. ಸ್ಪರ್ಧಾ ವಿಜೇತರಿಗೆ ನಗದು ಸಹಿತ ಪ್ರಮಾಣ ಪತ್ರ ವಿತರಿಸಿದರು.

ಎಲಿಮುನ್ನೋಳಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಅನಸೂಯಾ ಪಾಟೀಲ, ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ವಿಜಯ ಕೌಜಲಗಿ, ಎಸ್.ಬಿ. ಶಿಂಗೆ ಇದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಡಿ.ನಾಯಿಕ ಸ್ವಾಗತಿಸಿದರು, ಶಿವಾನಂದ ಪಾಟೀಲ ನಿರೂಪಿಸಿದರು. ಎಂ.ವಿ. ಮಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry