5

‘ ಕನ್ನಡಿಗರು ಭಾಷೆ ಉಳಿವಿಗೆ ಬದ್ಧರಾಗಿ’

Published:
Updated:

ಕುರುಗೋಡು: ‘ ಕನ್ನಡಿಗರು ನೆಲ–ಜಲ, ಭಾಷೆ ಉಳಿವಿಗಾಗಿ ಬದ್ಧರಾಗಿರಬೇಕು’ ಎಂದು ಬಿಜೆಪಿ ಮುಖಂಡ ಬಿ.ಜಿ.ಪಿ ಮುಖಂಡ ಕೆ.ಎಸ್.ದಿವಾಕರ್ ಹೇಳಿದರು. ಇಲ್ಲಿಗೆ ಸಮೀಪದ ಕುಡತಿನಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಶುಕ್ರವಾರ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

‘ ಜಿಲ್ಲೆಯಲ್ಲಿರುವ ಕಾರ್ಖಾನೆಗಳು ಬೇರೆ ರಾಜ್ಯದವರಿಗೆ ಮಣೆ ಹಾಕಬಾರದು. ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ಕಲ್ಪಿಸಿಕೊಡಬೇಕು’ ಎಂದರು. ಕರವೇ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಎಚ್.ಸುರೇಶ್ ಮಾತನಾಡಿ, ‘ ವೇದಿಕೆ ಜನರಿಗೆ ಮೂಲ ಸೌಕರ್ಯ ದೊರೆವಯುಂತೆ ಹೋರಾಟ ರೂಪಿಸಬೇಕು’ ಎಂದು ಹೇಳಿದರು.

ಡಾ.ಅರ್ಪಣಾ, ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಬಿ.ರಾಜಶೇಖರ್, ಮುಖಂಡರಾದ ನಾಗರಾಜ್, ವಸಂತ್, ರಾಜೇಶ್, ಪ್ರವೀಣ್, ರಾಜ , ಮಹೇಶ್ ಗೌಡ, ಬಸವರಾಜ್ ಮೇಟಿ, ಭಾಷಾ, ಆಟೋ ವೀರೇಶ್, ಗಣೇಶ್ ರಾಘವೇಂದ್ರ ಉಪಸ್ಥಿತರಿದ್ದರು. ಶಿಬಿರದಲ್ಲಿ ಸುಮಾರು 500 ಮಂದಿ ತಪಾಸಣೆಗೆ  ಒಳಗಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry